ನೀಲಾವರ: ಉಡುಪಿ ವಿಧಾನಸಭಾ ಕ್ಷೇತ್ರದ ನೀಲಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ. ರಘುಪತಿ ಭಟ್ ಇಂದು ಚಾಲನೆ ನೀಡಿ, ಪೂರ್ಣಗೊಂಡ ಕಾಮಗಾರಿಗಳನ್ನು ವೀಕ್ಷಿಸಿದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನೀಲಾವರ ಕ್ರಾಸ್ ನಿಂದ ಮಹಿಷಮರ್ದಿನಿ ದೇವಸ್ಥಾನದ ರಸ್ತೆ,ಮಧ್ಯಸ್ಥರ ಬೆಟ್ಟು ಮಾರ್ಗವಾಗಿ ಎಳ್ಳಂಪಳ್ಳಿ ಕೊಕ್ಕರ್ಣೆ ರಸ್ತೆ,ನೀಲಾವರ ಮಂಜುನಾಥ ನಾಯ್ಕ ಅಂಗಡಿಯಿಂದ ಚರ್ಚ್ ರಸ್ತೆಯ ಮೂಲಕ ಮಹಿಷಮರ್ದಿನಿ ದೇವಸ್ಥಾನದ ರಸ್ತೆ, ಹೆಬ್ಬಾರ ಬೆಟ್ಟು ಮಾರ್ಗವಾಗಿ ಎಳ್ಳಂಪಳ್ಳಿ ರಸ್ತೆ ಕಾಂಕ್ರೀಟಿಕರಣ ಸೇರಿದಂತೆ ಒಟ್ಟು ರೂ. 13.05 ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ವೀಣಾ ನಾಯ್ಕ್, ನೀಲಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಂದ್ರ ಕುಮಾರ್, ಉಪಾಧ್ಯಕ್ಷರಾದ ಬೇಬಿ ಎಸ್, ರಾಜ್ಯ ಬಿಜೆಪಿ ಎಸ್ ಟಿ ಮೋರ್ಚಾದ ಕಾರ್ಯದರ್ಶಿಗಳಾದ ಉಮೇಶ್ ನಾಯ್ಕ್, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ನಳಿನಿ ಪ್ರದೀಪ್ ರಾವ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸುರೇಂದ್ರ ಅಡಿಗ, ನೀಲಾವರ ಮಹಿಷಮರ್ದಿನಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎನ್. ರಘುರಾಮ್ ಮಧ್ಯಸ್ಥ, ಸ್ಥಳೀಯರಾದ ಬಾಲಕೃಷ್ಣ ಶೆಟ್ಟಿ, ಆರೂರು ತಿಮ್ಮಪ್ಪ ಶೆಟ್ಟಿ, ನೀಲಾವರ ಗ್ರಾಮ ಪಂಚಾಯತ್ ಸದಸ್ಯರುಗಳಾದ ರಮೇಶ್ ಪೂಜಾರಿ, ಉಮೇಶ್ ಶೆಟ್ಟಿ, ಜ್ಯೋತಿ ವಿ. ಶೆಟ್ಟಿ, ಶಿಲ್ಪಾ ಹರೀಶ್ ರಾವ್, ಸುಮಾ ದೇವಾಡಿಗ, ಪ್ರಿಯಾ ಎಚ್ ಹಾಗೂ ಪಿ.ಎಂ.ಜಿ.ಎಸ್.ವೈ ಸಹಾಯಕ ಅಭಿಯಂತರರಾದ ತ್ರಿನೇಶ್ ಮತ್ತು ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
10/08/2021 02:22 pm