"ಪಬ್ಲಿಕ್ ನೆಕ್ಸ್ಟ್" ವರದಿ
ಮುಲ್ಕಿ: ಪಡುಪಣಂಬೂರು ಗ್ರಾಮ ಪಂಚಾಯಿತಿಯಲ್ಲಿ ಕಳೆದ ಕೆಲವು ತಿಂಗಳಿನಿಂದ ಪಂಚಾಯತ್ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿ ನಡುವಿನ ಶೀತಲ ಸಮರಕ್ಕೆ ಕೊನೆಗೂ ತೆರೆಬಿದ್ದಿದ್ದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿತಾ ವಿ ಕ್ಯಾಥರೀನ್ ರವರನ್ನು ಉಳಾಯಿಬೆಟ್ಟು ಗ್ರಾಮ ಪಂಚಾಯಿತಿಗೆ ವರ್ಗಾವಣೆ ಗೊಳಿಸಲಾಗಿದ್ದು ಕೆಮ್ರಾಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜ ಅವರನ್ನು ಪ್ರಭಾರ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
ಕಳೆದ ಕೆಲವು ತಿಂಗಳ ಹಿಂದೆ ಪಡುಪಣಂಬೂರು ಗ್ರಾಮ ಪಂಚಾಯಿತಿಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅಧ್ಯಕ್ಷರು ಮತ್ತು ಪಂಚಾಯತ್ ಪಿಡಿಒ ನಡುವೆ ಅನೇಕ ವಿಷಯದಲ್ಲಿ ಮನಸ್ತಾಪ ಉಂಟಾಗಿದ್ದು ಈಚೆಗೆ ಪಂಚಾಯತ್ ವ್ಯಾಪ್ತಿಯ ತೋಕೂರು ನಲ್ಲಿ ಗೋಡೆ ಬರಹ ಕಾರ್ಯಕ್ರಮವೊಂದರಲ್ಲಿ ಪಂಚಾಯತ್ ಅಧ್ಯಕ್ಷರಿಗೆ ತಿಳಿಸಿದೆ ಅಭಿವೃದ್ಧಿ ಅಧಿಕಾರಿ ತೆರಳಿ ಕಾರ್ಯಕ್ರಮ ನಡೆಸಿದ್ದು ಅಧ್ಯಕ್ಷರ ಕಣ್ಣು ಕೆಂಪಾಗಿಸಿತ್ತು.
ಇದನ್ನೇ ಮುಂದಿಟ್ಟುಕೊಂಡು ಅಧ್ಯಕ್ಷರು ತಮ್ಮ ಕಚೇರಿಯಲ್ಲಿ ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದ್ದು ಬಳಿಕ ಶಾಸಕರಿಗೆ ಈ ಬಗ್ಗೆ ದೂರು ನೀಡಿ ಅಭಿವೃದ್ಧಿ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.
ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಏಳು ವರ್ಷಗಳಿಂದ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವ ಅಭಿವೃದ್ಧಿ ಅಧಿಕಾರಿಯವರು ಪಂಚಾಯತಿ ಕಾಮಗಾರಿ ಹಾಗೂ ಆಡಳಿತದಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ನೋಡಿಕೊಳ್ಳುತ್ತಿದ್ದರು. ಇದು ಕೆಲ ನುಂಗಣ್ಣ ಗಳಿಗೆ ತಡೆಯಲು ಅಸಾಧ್ಯವಾಗಿ ಅಭಿವೃದ್ಧಿ ಅಧಿಕಾರಿ ವರ್ಗಾವಣೆ ಗೊಳಿಸುವಂತೆ ಬಕಪಕ್ಷಿಯಂತೆ ಕಾಯುತ್ತಿದ್ದರು ಎನ್ನಲಾಗಿದೆ. ಕಳೆದ ದಿನಗಳ ಹಿಂದೆ ನಡೆದ ಪಂಚಾಯತ್ ಸದಸ್ಯರ ಸಭೆಯಲ್ಲಿ ಕೆಲ ಸದಸ್ಯರು ಮತ್ತು ಅಭಿವೃದ್ಧಿ ಅಧಿಕಾರಿ ನಡುವೆ ಮತ್ತೆ ವಾಗ್ವಾದ ಉಂಟಾಗಿದ್ದು ಮರುದಿನವೇ ಅಭಿವೃದ್ಧಿ ಅಧಿಕಾರಿ ವರ್ಗಾವಣೆಗೆ ರಾಜಕೀಯ ಪ್ರೇರಿತ ಆದೇಶ ಬಂದಿದ್ದು ಆಡಳಿತ ಪಕ್ಷದ ಸದಸ್ಯರು ಒಳಗೊಳಗೆ ಖುಷಿ ಪಡುವಂತಾಗಿದೆ.
ಅಭಿವೃದ್ಧಿ ಅಧಿಕಾರಿ ಅನಿತಾ ಮಾತನಾಡಿ ತಾವೇ ಉಳಾಯಿಬೆಟ್ಟು ಗ್ರಾಪಂ ಗೆ ವರ್ಗಾವಣೆ ಬಯಸಿದ್ದು ಯಾವುದೇ ವಿವಾದವಿಲ್ಲ ಎಂದು ಹೇಳಿಕೊಂಡಿದ್ದಾರೆ.
ಈ ಬಗ್ಗೆ "ಪಬ್ಲಿಕ್ ನೆಕ್ಸ್ಟ್" ಕೂಡ ವರದಿ ಮಾಡಿದ್ದು ನಿಜವಾಗಿದೆ.
Kshetra Samachara
05/08/2021 07:49 pm