ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅದಾನಿ ಗ್ಯಾಸ್ ಪೈಪ್ ಲೈನ್ ಕಾಮಗಾರಿಯಿಂದ ಹಾನಿ, ತೆರವುಗೊಳ್ಳದ ಅವಶೇಷ

ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ದಿನದ ಹಿಂದೆ ಅದಾನಿ ಗ್ಯಾಸ್ ಪೈಪ್ ಲೈನ್ ಕಾಮಗಾರಿಯಿಂದ ಹಾನಿಗೀಡಾದ ಲಲಿತ್ ಮಹಲ್ ಕಟ್ಟಡದಲ್ಲಿದ್ದ ಹೋಟೆಲಿನ ಎದುರು ಭಾಗದ ಅವಶೇಷಗಳು ಇನ್ನೂ ತೆರವುಗೊಂಡಿಲ್ಲ

ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರಪೂಜಾರಿ ಸೂಚನೆ ಮೇರೆಗೆ ಕಾಮಗಾರಿ ಸ್ಥಗಿತಗೊಂಡಿದ್ದು ಪೈಪ್ಲೈನ್ ಗುತ್ತಿಗೆದಾರರು ಸರಿಪಡಿಸುವ ಭರವಸೆ ನೀಡಿದರೂ ಅವೈಜ್ಞಾನಿಕ ಕಾಮಗಾರಿಯಿಂದ ಕಟ್ಟಡಕ್ಕೆ ಹಾನಿ ಉಂಟಾಗಿದ್ದು ಮುಂದಿನ ದಿನಗಳಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಕಟ್ಟಡದ ಮಾಲೀಕರು ದೂರು ನೀಡಿರುವ ಹಿನ್ನೆಲೆಯಲ್ಲಿ ಕಾಮಗಾರಿ ಸದ್ಯಕ್ಕೆ ಪ್ರಾರಂಭವಾಗುವ ಲಕ್ಷಣ ಕಾಣಿಸುತ್ತಿಲ್ಲ.

ಆದರೆ ಕಾಮಗಾರಿ ನಡೆಸುವಾಗ ಕಟ್ಟಡದಲ್ಲಿ ಬಾಡಿಗೆ ಇರುವ ಹೋಟೆಲಿನ ಎದುರು ಭಾಗ ಕುಸಿತಕಂಡಿದ್ದು ಕಲ್ಲಿನ, ಜೇಡಿಮಣ್ಣಿನ ಅವಶೇಷಗಳು ಹಾಗೆ ಇದೆ. ಇದರಿಂದಾಗಿ ಹೋಟೆಲ್ ಗೆ ಬರುವ ಗ್ರಾಹಕರಿಗೆ ಹಾಗೂ ಕಟ್ಟಡದಲ್ಲಿ ವ್ಯವಹಾರಕ್ಕೆ ಬರುವ ನಾಗರಿಕರಿಗೆ ನಡೆದುಕೊಂಡು ಹೋಗಲು ತೀವ್ರ ತೊಂದರೆಯಾಗಿದೆ. ಅಲ್ಲದೆ ಬಸ್ಸು ನಿಲ್ದಾಣದ ಬಳಿಯ ಮೆಡಿಕಲ್ ಎದುರು ಪೈಪ್ಲೈನ್ ಗುತ್ತಿಗೆದಾರರು ಬೃಹತ್ ಹೊಂಡ ತೋಡಿದ್ದು ತೆರೆದ ಸ್ಥಿತಿಯಲ್ಲಿದೆ.

ಜನನಿಬಿಡ ಮುಲ್ಕಿ ಬಸ್ ನಿಲ್ದಾಣದಲ್ಲಿ ತೆರೆದ ಹೊಂಡ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹೋಟೆಲಿನ ಎದುರು ಭಾಗದ ಕುಸಿತ ಕಂಡಿರುವ ಕಲ್ಲು ಹಾಗೂ ಮಣ್ಣಿನ ರಾಶಿಯನ್ನು ತಾತ್ಕಾಲಿಕ ನೆಲೆಯಲ್ಲಿ ತೆಗೆದು, ಬಸ್ಸು ನಿಲ್ದಾಣದ ಬಳಿಯ ಹೊಂಡವನ್ನು ಮುಚ್ಚಿ ನಾಗರಿಕರಿಗೆ ಸಂಚರಿಸಲು ಅನುಕೂಲ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

30/07/2021 05:25 pm

Cinque Terre

33.82 K

Cinque Terre

2

ಸಂಬಂಧಿತ ಸುದ್ದಿ