ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಹೆದ್ದಾರಿ ಕತ್ತಲು ಸಂಚಾರ ದುಸ್ತರ ಪ್ರಯಾಣಿಕರ ಆಕ್ರೋಶ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ಸುನಿಲ್ದಾಣದ ಬಳಿ ಹೆದ್ದಾರಿ ದಾರಿದೀಪಗಳು ಉರಿಯದೆ ಕತ್ತಲು ಆವರಿಸಿದ್ದು ಸಂಚಾರ ದುಸ್ತರವಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕ ದಯಾನಂದ ಮಟ್ಟು ಮಾತನಾಡಿ ಕಳೆದ ಕೆಲದಿನಗಳಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿದೀಪ ಅವ್ಯವಸ್ಥೆ ಉಂಟಾಗಿದ್ದು ಹೆದ್ದಾರಿ ಕತ್ತಲು ಮಯವಾಗಿದೆ. ರಾಷ್ಟ್ರೀಯ ಹೆದ್ದಾರಿ ಕತ್ತಲಾವರಿಸಿದ್ದರಿಂದ ಪ್ರಯಾಣಿಕರಿಗೆ ನಡೆದಾಡಲು ತೀವ್ರ ತೊಂದರೆಯಾಗಿದೆ. ಮುಲ್ಕಿ ಬಸ್ ನಿಲ್ದಾಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರು ಕಡೆ ಅಪಘಾತದ ಪ್ರದೇಶಗಳಿದ್ದು ದಾರಿದೀಪದ ಅವ್ಯವಸ್ಥೆ ಉಂಟಾಗಿದೆ.

ಮುಲ್ಕಿ ಬಿಲ್ಲವ ಸಂಘ, ಮುಲ್ಕಿ ಜಂಕ್ಷನ್, ಬಪ್ಪನಾಡು ಜಂಕ್ಷನ್ ಬಳಿ ಹೆದ್ದಾರಿ ದಾರಿದೀಪಗಳು ಸರಿಯಾಗಿ ಉರಿಯದೆ ಪಾದಚಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಮೊದಲೇ ಸರ್ವಿಸ್ ರಸ್ತೆ ಅವ್ಯವಸ್ಥೆಯಿಂದ ಕಂಗೆಟ್ಟಿರುವ ಮುಲ್ಕಿ ಜನತೆಗೆ ದಾರಿದೀಪ ಅವ್ಯವಸ್ಥೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು ಸಂಬಂಧಪಟ್ಟ ಇಲಾಖೆ ಹೆದ್ದಾರಿಯಲ್ಲಿ ಟೋಲ್ ತೆಗೆದುಕೊಳ್ಳುವುದರಲ್ಲಿ ಬ್ಯೂಸಿಯಾಗಿದೆ ಎಂದು ದಯಾನಂದ ಮಟ್ಟು ವೆಂಗ್ಯವಾಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

29/07/2021 03:32 pm

Cinque Terre

5.29 K

Cinque Terre

0

ಸಂಬಂಧಿತ ಸುದ್ದಿ