ಸುಬ್ರಹ್ಮಣ್ಯಕ್ಕೆ ತಮಿಳಿನ ಸೂಪರ್ ಸ್ಟಾರ್ ದಂಪತಿ ಭೇಟಿ

ಪ್ರಸಿದ್ದ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತಮಿಳಿನ ಸೂಪರ್ ಸ್ಟಾರ್ ನಿರ್ದೇಶಕ ಅಟ್ಲೀ ಯಾನೆ ಅರುಣ್ ಕುಮಾರ್ ದಂಪತಿ ಭೇಟಿ ನೀಡಿ ದೇವರ ದರ್ಶನ ಪಡೆದರು. ತಮಿಳಿನಲ್ಲಿ ಸೂಪರ್ ಹಿಟ್ ಫಿಲ್ಮ್ ಗಳನ್ನು ನಿರ್ದೇಶಿಸಿರುವ ಅಟ್ಲೀ 2013ರಲ್ಲಿ ತಮಿಳಿನ ವಿಜಯ ದಳಪತಿ ಅಭಿನಯದ ಬ್ಲಾಕ್ ಬಾಸ್ಟರ್ ಸಿನೆಮಾ 'ಬಿಗಿಲ್' ನಿರ್ಮಿಸಿದ್ದರು. ಆ ಚಿತ್ರ ಬಾರಿ ಯಶಸ್ಸು ಕಂಡಿತು.

ಅಟ್ಲೀ ಸಹನಿರ್ದೇಶಕನಾಗಿ ವಿಕ್ರಮ್ ಅಭಿನಯದ ಎಂದಿರನ್, ನಂತರ ವಿಜಯ್ ಅಭಿನಯದ ಸಾಲು ಸಾಲು ಹಿಟ್ ಚಿತ್ರಗಳಾದ ತೇರಿ, ಮಾರ್ಷಲ್ ಹಾಗೂ ಬಿಗಿಲ್ ನಿರ್ದೇಶಿಸಿದರು. ಅಟ್ಲೀ ತಮ್ಮ ಪತ್ನಿ ಕೃಷ್ಣ ಪ್ರಿಯಾ ಅವರ ಜೊತೆ ಆಗಮಿಸಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.

ನಂತರ ದೇವಳದ ವತಿಯಿಂದ ನಡೆಯುವ ಅನ್ನದಾನ ನಿಧಿಗೆ ₹ 10 ಲಕ್ಷ ಮೊತ್ತದ ಚೆಕ್‌ ಅನ್ನು ಅವರು ಹಸ್ತಾಂತರಿಸಿದರು.
ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಇಂಜಾಡಿ ಇದ್ದರು.

Kshetra Samachara

Kshetra Samachara

2 months ago

Cinque Terre

2.81 K

Cinque Terre

0