ಮುಲ್ಕಿ: ಮೊದಲ ಮಳೆಗೆ ಕೆಸರುಮಯವಾದ ಶಿಮಂತೂರು ರಸ್ತೆ

ಮುಲ್ಕಿ: ಮುಲ್ಕಿ ಸಮೀಪದ ಶಿಮಂತೂರು ಪಂಜಿನಡ್ಕ ರಸ್ತೆ ಮೊದಲ ಮಳೆಗೆ ಕೆಸರುಮಯವಾಗಿದ್ದು ಸಂಚರಿಸಲು ಅನಾನುಕೂಲವಾಗಿದೆ. ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜಿನಡ್ಕ ದಿಂದ ಶಿಮಂತೂರು ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅರ್ಧಂಬರ್ಧ ಕಾಂಕ್ರೀಟಿಕರಣ ನಡೆದಿದ್ದು ಮೊದಲ ಮಳೆಗೆ ರಸ್ತೆ ಕೆಸರುಮಯವಾಗಿದೆ.

ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೈಲೊಟ್ಟು ಪಂಜಿನಡ್ಕ ಕಡೆಯಿಂದ ಶಿಮಂತೂರು ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸುಮಾರು ನೂರು ಮೀಟರ್ ನಷ್ಟು ಡಾಮರೀಕರಣಕ್ಕೆ ಬಕಪಕ್ಷಿಯಂತೆ ಕಾಯುತ್ತಿದ್ದು ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಕೆಸರುಮಯವಾಗಿದೆ ಅಲ್ಲದೆ ರಸ್ತೆಯಲ್ಲಿ ಬೃಹದಾಕಾರದ ಹೊಂಡ ಸೃಷ್ಟಿಯಾಗಿ ಈಜಾಡಲು ಅನುಕೂಲವಾಗಿದೆ!!

ಸುಮಾರು ನೂರು ಮೀಟರ್ ರಸ್ತೆ ಕಾಮಗಾರಿಗೆ ಅನೇಕ ಬಾರಿ ಸ್ಥಳೀಯ ಶಾಸಕರಿಗೆ, ಪಂಚಾಯಿತಿಗೆ, ಮನವಿ ಸಲ್ಲಿಸಿದ್ದರೂ ಇದುವರೆಗೂ ಕಾಮಗಾರಿ ಪೂರ್ತಿಗೊಂಡಿಲ್ಲ. ಶಿಮಂತೂರು ಭಾಗದ ಜನತೆಗೆ ಅತಿಕಾರಿಬೆಟ್ಟು ಪಂಚಾಯತಿಗೆ ಹೋಗಲು ಈ ರಸ್ತೆ ಪ್ರಮುಖ ಕೊಂಡಿಯಾಗಿದ್ದು ಸಂಬಂಧಪಟ್ಟ ಆಡಳಿತ ದುರಸ್ತಿಗೆ ಮೀನಮೇಷ ಎಣಿಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮೊದಲ ಮಳೆಗೆ ರಸ್ತೆಯಲ್ಲಿ ಅಪಾಯಕಾರಿ ಕೆರೆ ನಿರ್ಮಾಣವಾಗಿದ್ದು ವಾಹನ ಚಾಲಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಕೂಡಲೇ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ರಸ್ತೆ ಅವ್ಯವಸ್ಥೆ ಸರಿಪಡಿಸುವುದೇ ಅಲ್ಲದೆ ಸೂಕ್ತ ಚರಂಡಿ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ

Kshetra Samachara

Kshetra Samachara

6 days ago

Cinque Terre

19.14 K

Cinque Terre

0