ಮಂಗಳೂರು: ಸಾರಿಗೆ ಮುಷ್ಕರ: ಕರಾವಳಿಯಲ್ಲಿ ನೋ ಇಫೆಕ್ಟ್

ಮಂಗಳೂರು: ಸಾರಿಗೆ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಆದರೆ ಕರಾವಳಿಯಲ್ಲಿ ಹೇಳಿಕೊಳ್ಳುವಂತಹ ಬಿಸಿ ತಟ್ಟಿಲ್ಲ. ನಗರದೊಳಗೆ ಖಾಸಗಿ ಸಿಟಿ ಬಸ್ ಹಾಗೂ ಸರ್ವೀಸ್ ಬಸ್ ಗಳು ಕಾರ್ಯಾಚರಿಸುತ್ತಿರುವುದರಿಂದ ಯಾವುದೇ ರೀತಿಯ ದೊಡ್ಡ ಮಟ್ಟಿನ ತೊಂದರೆಗಳು ಸಂಭವಿಸಿಲ್ಲ.

ನಿನ್ನೆಯೇ ಬಹುತೇಕ ಕೆಎಸ್ಆರ್ ಟಿಸಿ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದು, ಇಂದೂ ಕೂಡಾ ಪರಿಸ್ಥಿತಿ ಅದೇ ರೀತಿ ಮುಂದುವರಿದಿದೆ. ಇಂದು ಬೆಳಗ್ಗೆಯಿಂದ ಬೆರಳೆಣಿಕೆಯಷ್ಟು ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದು, ಈ ಹಿನ್ನೆಲೆಯಲ್ಲಿ ದೂರ ಪ್ರಯಾಣದ ಕೆಲವೊಂದು ಬಸ್ ಗಳು ಸಂಚಾರ ನಡೆಸಿವೆ. ಆದರೆ ನಗರದೊಳಗೆ ಬಸ್ ಸಂಚಾರ ಮಾಡುವ ಪ್ರಯಾಣಿಕರಿಗೆ ತೊಂದರೆಯಾಗಿಲ್ಲದಿದ್ದರೂ, ದೂರದೂರಿಗೆ ಪ್ರಯಾಣಿಸುವ ಪ್ರಯಾಣಿಕರು ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸಿದ್ದರು.

ಮಂಗಳೂರು ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಿಂದ ಇಂದು ಬೆಂಗಳೂರು ಕಡೆಗೆ ವೋಲ್ವಾ, ರಾಜಹಂಸ ಸೇರಿ ಮೂರು ಬಸ್ ಗಳು ಪ್ರಯಾಣ ನಡೆಸಿದರೆ, ಕಾಸರಗೋಡಿಗೆ ಎರಡು, ಧರ್ಮಸ್ಥಳಕ್ಕೆ 3 ಬಸ್, ಮೈಸೂರಿಗೆ 1 ಸಾರಿಗೆ ಬಸ್ ಗಳು ಪ್ರಯಾಣ ಬೆಳೆಸಿವೆ

Kshetra Samachara

Kshetra Samachara

10 days ago

Cinque Terre

11.37 K

Cinque Terre

0