ಉಡುಪಿ : ಎರಡನೇ ದಿನಕ್ಕೆ ಕಾಲಿಟ್ಟ ಕೆಎಸ್ಆರ್ಟಿಸಿ ಮುಷ್ಕರ: ಉಡುಪಿಯಲ್ಲಿ ಖಾಸಗಿ ಬಸ್ ಗಳ ಭರಾಟೆ

ಉಡುಪಿ :ಕೆಎಸ್ಆರ್ಟಿಸಿ ಚಾಲಕರು ಮತ್ತು ನಿರ್ವಾಹಕರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಉಡುಪಿ ಜಿಲ್ಲೆಯಲ್ಲಿ ಇಂದು ಕೂಡ ಕೆಎಸ್ಆರ್ಟಿಸಿ ಬಸ್ಸುಗಳು ರಸ್ತೆಗಿಳಿದಿಲ್ಲ. ಕೆಎಸ್ ಆರ್ ಟಿಸಿ ಬಸ್ ಗಳನ್ನು ಉಡುಪಿಯ ಸರಕಾರಿ ಡಿಪೋದಲ್ಲಿ ನಿಲ್ಲಿಸಲಾಗಿದೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳ ಸೇವೆ ಮುಂದುವರೆದಿದೆ.

ಹಾಗೆ ನೋಡಿದರೆ ಉಡುಪಿ ಜಿಲ್ಲೆಯಾದ್ಯಂತ ಸಂಚಾರದ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಖಾಸಗಿ ಬಸ್ಸುಗಳೇ. ನಿನ್ನೆಯಿಂದ ಹೆಚ್ಚುವರಿ ಬಸ್ ಗಳು, ಮಿನಿ ಟೆಂಪೋ ಗಳು,ಕ್ಯಾಬ್ ಗಳು ರಸ್ತೆಗಿಳಿದಿದ್ದು ಸಾರ್ವಜನಿಕರ,ಪ್ರಯಾಣಿಕರ ಸೇವೆಯಲ್ಲಿ ತೊಡಗಿವೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದರೆ,ಖಾಸಗಿ ಬಸ್ ನಿಲ್ದಾಣಗಳಲ್ಲಿ ಪ್ರೈವೇಟ್ ಬಸ್ ಗಳ ಭರಾಟೆ ಜೋರಾಗಿ ಇದೆ.

Kshetra Samachara

Kshetra Samachara

10 days ago

Cinque Terre

14.63 K

Cinque Terre

3

 • Shashidhar Shashi
  Shashidhar Shashi

  ಲಾಯಿಲ ದಲ್ಲಿ ಚೂರಿ ಇರಿತ

 • Usha Poojary
  Usha Poojary

  adanella kasagiyawaru thamma labakkagi thamma jana baladinda nilisibittidare. nepamatra corona

 • Usha Poojary
  Usha Poojary

  udupili sarkari bus yellide