ಮಂಗಳೂರು: ನಗರ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಅವರು ತಮ್ಮ ಹೆಸರು ಫಲಕದಲ್ಲಿ ತುಳು ಲಿಪಿ ಬಳಸಿದ ಮೊದಲ ನಗರ ಪೊಲೀಸ್ ಆಯುಕ್ತರು ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ್ ಕತ್ತಲ್ ಸಾರ್ ಅವರು ತುಳುವಿಗೆ ರಾಜ್ಯ ಅಧಿಕೃತ ಭಾಷಾ ಸ್ಥಾನಮಾನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಭಾರತದಲ್ಲಿ 22 ಭಾಷೆಗಳನ್ನು ಅಧಿಕೃತ ಭಾಷೆಗಳೆಂದು ಗುರುತಿಸುವ ಮತ್ತು ಕನ್ನಡ, ಹಿಂದಿ, ಕೊಂಕಣಿ ಸೇರಿದಂತೆ ಇನ್ನು ಅನೇಕ ಭಾಷೆಗಳನ್ನುಒಳಗೊಂಡಿರುವ ಭಾರತೀಯ ಸಂವಿಧಾನದ 8 ನೇ ಪರಿಚ್ಛೇದ ತುಳು ಸೇರಿಸಲು ತುಳುನಾಡಿನ ಜನರು ಹೋರಾಟ ನಡೆಸುತ್ತಿದ್ದಾರೆ.
Kshetra Samachara
23/01/2021 02:25 pm