ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 'ಸ್ವಚ್ಛ ಉಡುಪಿ' ಘೋಷಣೆ ಮಾತ್ರ; ಫ್ಲ್ಯಾಟ್ ನಿಂದ ತ್ಯಾಜ್ಯ ನೀರು ಜನ ವಸತಿಯೆಡೆಗೆ!, ರೋಗ ಭೀತಿ

ಉಡುಪಿ: ಸ್ವಚ್ಛ ಉಡುಪಿ ಎಂದು ಕೊಚ್ಚಿಕೊಳ್ಳುವ ಅಧಿಕಾರಿಗಳು ಅಪಾರ್ಟ್ ಮೆಂಟ್ ಮಾಲೀಕರು ಹೊರ ಬಿಡುವ ಕಲುಷಿತ ನೀರಿನ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ!

ಉಡುಪಿ ನಗರಸಭೆ ಅಧ್ಯಕ್ಷರ ವಾರ್ಡ್ ನಲ್ಲೇ ಈ ಕತೆಯಾದರೆ ಬೇರೆ ಕಡೆಯ ಪರಿಸ್ಥಿತಿ ಊಹಿಸಿ. ಪರ್ಕಳದ ಮಂಜುನಾಥ ನಗರ ಬಡಾವಣೆಯಲ್ಲಿ ಫ್ಲ್ಯಾಟ್ ಸಮುಚ್ಚಯವೊಂದರಿಂದ ಪಕ್ಕದ ಸೈಟ್ ಗೆ ಕಲುಷಿತ ನೀರು ಬಿಡಲಾಗುತ್ತಿದ್ದು,ಅಕ್ಕಪಕ್ಕದ ಮನೆಯವರಿಗೆ ಭಾರಿ ದುರ್ನಾತದಿಂದಾಗಿ "ನರಕ ದರ್ಶನ" ವಾಗುತ್ತಿದೆ. ಈ ಕಲುಷಿತ ನೀರು ಸ್ಥಳೀಯ ನಿವಾಸಿಗರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.

ಸ್ಥಳೀಯರು ಮುನ್ಸಿಪಾಲಿಟಿ ಅಧಿಕಾರಿಗಳಿಗೆ ಮೂರ್ನಾಲ್ಕು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ಈ ತನಕ ಯಾವುದೇ ಪ್ರಯೋಜನವೂ ಆಗಿಲ್ಲ. ಇದಕ್ಕೆ ಪ್ರಮುಖ ಕಾರಣ ಈ ರೀತಿ ಕಲುಷಿತ ನೀರು ಬಿಡುವ ವ್ಯಕ್ತಿ ಪ್ರಭಾವಿ ರಾಜಕೀಯ ನಾಯಕ!

ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಊರಿನ ಲೋಕಸಭೆ ಸದಸ್ಯರು, ಶಾಸಕರು, ನಗರಸಭೆ ಸದಸ್ಯರು ಮಾಡಿದಂತಹ ಸತ್ಕಾರ್ಯಗಳಿಗೆ ತದ್ವಿರುದ್ಧ ಕೆಲಸವನ್ನು ಈ ಪ್ರಭಾವಿ ನಾಯಕ ಮಾಡುತ್ತಿದ್ದಾರೆ.

ಉಡುಪಿ ನಗರದ ಆರೋಗ್ಯವನ್ನು ಹಾಳು ಮಾಡುವ ಇಂತಹ ಜನರ ಪರ ನಿಲ್ಲದೆ ಸ್ವಚ್ಛತೆ ಮತ್ತು ಸ್ಥಳೀಯರ ಆರೋಗ್ಯದ ದೃಷ್ಟಿಯಿಂದ ನಗರಸಭೆ ಅಧಿಕಾರಿಗಳಿಂದ ಈ ಸಮಸ್ಯೆಗೆ ಪರಿಹಾರ ದೊರಕುವ ನಿರೀಕ್ಷೆಯಲ್ಲಿ ಸ್ಥಳೀಯರಿದ್ದಾರೆ.

Edited By : Manjunath H D
Kshetra Samachara

Kshetra Samachara

09/01/2021 02:11 pm

Cinque Terre

22.55 K

Cinque Terre

6

ಸಂಬಂಧಿತ ಸುದ್ದಿ