ಉಡುಪಿ: ನಡುನೀರಿನಲ್ಲಿ ಕೊರೊನಾ ವಾರಿಯರ್ಸ್ ನ್ನು ರಾಜ್ಯ ಸರಕಾರ ಕೈಬಿಟ್ಟಿದೆ ಎಂದು
ಉಡುಪಿಯಲ್ಲಿ ಆರು ದಿನಗಳಿಂದ ಪ್ರತಿಭಟನೆ ಮಾಡುತ್ತಿರುವ ಎನ್ ಎಚ್ ಎಂ ಸಿಬ್ಬಂದಿ ಆರೋಪಿಸಿದ್ದಾರೆ.
ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ಸಿಬ್ಬಂದಿಗಳು, ಉಡುಪಿಯಲ್ಲಿ 495 ಸಿಬ್ಬಂದಿಗಳಿಂದ ಅಸಹಕಾರ ಚಳುವಳಿ ಮಾಡುತ್ತಿದ್ದೇವೆ.
ಕರ್ತವ್ಯಕ್ಕೆ ಹಾಜರಾಗದೇ ಮನೆಯಲ್ಲೇ ಕುಳಿತಿದ್ದೇವೆ. ವೇತನ ಹೆಚ್ಚಳ, ಭತ್ಯೆ ನೀಡುವಂತೆ ಎಷ್ಟೇ ಬೇಡಿಕೆ ಇಟ್ಟರೂ ಸರಕಾರ ಸ್ಪಂದಿಸಿಲ್ಲ ಎಂದು ದೂರಿದ್ದಾರೆ.
ರಾಜ್ಯ ಸರ್ಕಾರದ ಕಣ್ಣಿನಲ್ಲಿ ರಕ್ತ ಇದ್ದರೆ ನಮ್ಮ ಸಂಬಳ ಹೆಚ್ಚಿಸಬೇಕು.
ನಮಗೆ ನಮ್ಮ ಅನ್ನದ ಪಾಲನ್ನು ಕೊಡಬೇಕು. ಸರಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ಕೊರೊನಾ ಆರಂಭ ಕಾಲದಲ್ಲಿ ಒಂದು ರಜೆಯನ್ನೂ ತೆಗೆದುಕೊಳ್ಳದೆ ಕೆಲಸ ಮಾಡಿದ್ದೇವೆ. ಆದರೂ ಸರಕಾರ ನಮ್ಮನ್ನು ನಿರ್ಲಕ್ಷಿಸಿದೆ ಎಂದು ಉಡುಪಿ ಜಿಲ್ಲಾಧ್ಯಕ್ಷ ಮಂಜುನಾಥ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
Kshetra Samachara
30/09/2020 03:00 pm