ಉಡುಪಿ: ಕರ್ನಾಟಕ ಬಂದ್ ಗೆ ಸಂಬಂಧಿಸಿದಂತೆ ಉಡುಪಿಯಲ್ಲಿಂದು ಬೆಳಿಗ್ಗೆಯೇ ಬಸ್ ಚಾಲಕರು,ಮಾಲಕರು ಮತ್ತು ಪ್ರತಿಭಟನಕಾರರ ನಡುವೆ ವಾಗ್ವಾದ,ಮಾತಿನ ಚಕಮಕಿ ನಡೆಯಿತು.
ಖಾಸಗಿ ಬಸ್ ಸಂಚಾರಕ್ಕೆ ಪ್ರತಿಭಟನಾಕಾರರು ಅಡ್ಡಿಪಡಿಸಿದಾಗ ಪೊಲೀಸರು ಮಧ್ಯಪ್ರವೇಶ ಮಾಡಿದರು.
ಖಾಸಗಿ ಬಸ್ ಓಡಿಸದಂತೆ ಪ್ರತಿಭಟನಾಕಾರರು ಚಾಲಕರನ್ನು ಅಡ್ಡಗಟ್ಟಿ ಒತ್ತಾಯ ಮಾಡಿದಾಗ,ಮಾತಿನ ಚಕಮಕಿ ನಡೆಯಿತು.
ಈ ಘಟನೆಯ ಬಳಿಕ ಕೆಲವು ಖಾಸಗಿ ಬಸ್ ಗಳು ಸಂಚಾರವನ್ನು ಅರ್ಧಕ್ಕೇ ಮೊಟಕುಗೊಳಿಸಿದ ಪ್ರಸಂಗವೂ ನಡೆಯಿತು.ಬಸ್ ಮಾಲಕರ ಜೊತೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದ ಪರಿಣಾಮ ನಿಲ್ದಾಣ ಪರಿಸರದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಆದರೆ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
Kshetra Samachara
28/09/2020 11:46 am