ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನರ್ಮ್ ಬಸ್ ಸ್ಟ್ಯಾಂಡ್ "ನರಕ ಸದೃಶ!"; ಸಮಾಜಸೇವಕರಿಂದ ಸ್ವಚ್ಛತಾ ಸೇವಾ ಕೈಂಕರ್ಯ

ಉಡುಪಿ: ಉಡುಪಿ ಸಿಟಿ ಬಸ್ ಸ್ಟ್ಯಾಂಡ್ ಬಳಿ ಇರುವ ನರ್ಮ್ ಬಸ್ ನಿಲ್ದಾಣ ಸೂಕ್ತ ನಿರ್ವಹಣೆ ಕಾಣದೆ ಸೊರಗುತ್ತಿದೆ. ಇತ್ತೀಚೆಗಷ್ಟೆ ಈ ಬಸ್ ನಿಲ್ದಾಣ ನಿರ್ಮಾಣಗೊಂಡಿದೆ.ಇದರ ಉದ್ಘಾಟನೆಗೂ ಮುನ್ನವೇ ಪರಿಸರದಲ್ಲಿ ಕಸ ಹಾಗೂ ಕೊಳೆತು ನಾರುತ್ತಿರುವ ವಸ್ತುಗಳು ತುಂಬಿ ಹೋಗಿವೆ.

ಜೊತೆಗೆ ಬಸ್ ನಿಲ್ದಾಣ ಕುಡುಕರ,ಭಿಕ್ಷುಕರ ಕೇಂದ್ರವಾಗಿ ಮಾರ್ಪಾಟಾಗಿದೆ.ಕಸ ಕಡ್ಡಿ,ಬಾಟಲ್ ಇಲ್ಲಿ ತಂದು ಎಸೆಯಲಾಗುತ್ತಿದೆ.ಅಲ್ಲಲ್ಲಿ ಉಗುಳಿ ನಿಲ್ದಾಣದ ಗೋಡೆ, ನೆಲ ಈಗಾಗಲೇ ವಾಸನೆಯಿಂದ ನಾರುತ್ತಿದೆ.

ಈ ಸಂಬಂಧ ಮಾಧ್ಯಮ ವರದಿಗಳು ಬಂದ ಬಳಿಕವೂ ಸಂಬಂಧಪಟ್ಟವರು ಇನ್ನೂ ಎಚ್ಚೆತ್ತುಕೊಂಡಿಲ್ಲ.

ನರ್ಮ್ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುವ ಬಗ್ಗೆ ಉಡುಪಿ ನಗರಸಭೆ ಅಥವಾ ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ಇದ್ದ ಕಾರಣ ಈ ಬಸ್ ನಿಲ್ದಾಣವನ್ನು ಸಮಾಜ ಸೇವಕ ಅನ್ಸಾರ್ ಅಹಮದ್ ಮತ್ತವರ ಹತ್ತು ಮಂದಿಯ ತಂಡ ಸ್ವಚ್ಛಗೊಳಿಸಿದೆ.

ನಗರಸಭೆಯವರು ಬಸ್ ನಿಲ್ದಾಣದ ಸಮರ್ಪಕ ನಿರ್ವಹಣೆ ಮಾಡಿ ನಗರದಲ್ಲಿ ಸ್ವಚ್ಛತೆಗೆ ಅದ್ಯತೆ ನೀಡಬೇಕು ಎಂದು ಅನ್ಸರ್ ಅಹಮದ್ ಈ ಸಂದರ್ಭ ಆಗ್ರಹಿಸಿದ್ದಾರೆ.

Edited By :
Kshetra Samachara

Kshetra Samachara

04/10/2020 05:53 pm

Cinque Terre

16.4 K

Cinque Terre

1

ಸಂಬಂಧಿತ ಸುದ್ದಿ