ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ಕೋಟಿ ವೆಚ್ಚದ ಎಪಿಎಂಸಿ ಕಟ್ಟಡ ಕಟ್ಟಿಗೆ, ಗುಜರಿ ವಸ್ತು ಸಂಗ್ರ ಹಾಲಯ; ತ್ಯಾಜ್ಯ, ಗಿಡಪೊದೆಗಳ ನಿಲಯ!

ಕಡಬ ತಾಲೂಕು ತಹಶೀಲ್ದಾರ್ ಕಚೇರಿಯ ಮುಂದೆಯೇ ಗಬ್ಬು ನಾರುತ್ತಾ, ಕಾಡು ಬೆಳೆದು, ಕಟ್ಟಿಗೆ ಸಂಗ್ರಹಿಸಲು, ಗುಜರಿ ವಸ್ತು ಹಾಕಲು ಸರಕಾರದ ಎಪಿಎಂಸಿ ಕಟ್ಟಡ ಬಳಕೆಯಾಗುತ್ತಿದೆ. ಕೋಟಿಗಟ್ಟಲೆ ಖರ್ಚು ಮಾಡಿ ಸುಸಜ್ಜಿತ ಈ ಕಟ್ಟಡ ನಿರ್ಮಾಣವಾದರೂ ಸಾರ್ವಜನಿಕರ ಉಪಯೋಗಕ್ಕೆ ಬಾರದೇ ಗಬ್ಬು ನಾರುವ ಸ್ಥಿತಿಗೆ ತಲುಪಿದೆ.

ಹೌದು, ಇದು ಕಡಬ ತಾಲೂಕಿನ ತಹಶೀಲ್ದಾರರ ಕಚೇರಿಯ ಎದುರುಗಡೆ ಇರುವ ಕೋಟಿಗಟ್ಟಲೆ ಹಣ ವ್ಯಯಿಸಿ ನಿರ್ಮಿಸಿದ ಎಪಿಎಂಸಿ ಕಟ್ಟಡದ ದುಸ್ಥಿತಿ. ಸಂತೆ ಮಾರುಕಟ್ಟೆ ನಡೆಸುವ ಸಲುವಾಗಿ ಈ ಕಟ್ಟಡ ನಿರ್ಮಾಣ ಮಾಡಲಾಗಿತ್ತು.

ಈ ಕಟ್ಟಡದ ಸುತ್ತಲೂ ಕಾಡು ಆವರಿಸಿದೆ. ಚರಂಡಿ ವ್ಯವಸ್ಥೆ ನಿರ್ವಹಣೆ ಮಾಡದೇ ಗಬ್ಬು ನಾರುತ್ತಾ ಸೊಳ್ಳೆ ಉತ್ಪತ್ತಿ ಕೇಂದ್ರವಾಗಿದೆ. ಇದು ಸ್ವತಃ ತಾಲೂಕು ದಂಡಾಧಿಕಾರಿಗಳ ಕಣ್ಣೆದುರೇ ಎಂಬುದು ವಿಪರ್ಯಾಸ.

ಅತ್ಯಾಧುನಿಕ ಸುಸಜ್ಜಿತ ಕಟ್ಟಡ ಇದ್ದರೂ ಕಡಬದ ಸಂತೆಗೆ ಬರುವ ವ್ಯಾಪಾರಿಗಳು ರಸ್ತೆ ಬದಿಯಲ್ಲೇ ವ್ಯಾಪಾರ ಮಾಡುತ್ತಾರೆ. ಇದಕ್ಕೆ ಕಾರಣ ಈ ಕಟ್ಟಡದಲ್ಲಿ ವ್ಯಾಪಾರ ಮಾಡಲು ಪಂಚಾಯತ್ ಅವಕಾಶ ಕಲ್ಪಿಸದಿರುವುದು.

ಕೂಡಲೇ ಸಂಬಂಧಿಸಿದ ಇಲಾಖೆ, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಅವನತಿಯತ್ತ ಸಾಗುತ್ತಿರುವ ಈ ಅಮೂಲ್ಯ ಕಟ್ಟಡ ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಿದೆ.

Edited By :
Kshetra Samachara

Kshetra Samachara

06/10/2020 07:36 pm

Cinque Terre

34.22 K

Cinque Terre

0

ಸಂಬಂಧಿತ ಸುದ್ದಿ