ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಿಶ್ವ ಹಿರಿಯರ ಶೋಷಣಾ ಜಾಗೃತಿ ದಿನಾಚರಣಾ ಕಾರ್ಯಕ್ರಮ

ಮಂಗಳೂರು: ಮಂಗಳೂರು ವಿವಿ ಎನ್ಎಸ್ಎಸ್,‌ ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಎಲ್ಡರ್ ಲೈನ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ವಿಶ್ವ ಹಿರಿಯರ ಶೋಷಣಾ ಜಾಗೃತಿ ದಿನಾಚರಣಾ ಕಾರ್ಯಕ್ರಮ ಮಂಗಳೂರಿನ ದ.ಕ.ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ದ.ಕ.ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಶೋಭಾ ಬಿ.ಜಿ. ಮಾತನಾಡಿ, ಇತ್ತೀಚಿಗೆ ವೃದ್ಧರಾದ ಹೆತ್ತವರನ್ನು ಅನಾಥಾಶ್ರಮಗಳಿಗೆ ಸೇರಿಸುವ ಪ್ರಕರಣಗಳು ಸಾಕಷ್ಟು ನಡೆಯುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ 'ವೆಲ್ ಫೇರ್ ಆ್ಯಂಡ್ ಮೈನ್ ಟೈನ್ಸ್ ಆಫ್ ಸೀನಿಯರ್ ಸಿಟಿಜನ್ -2007' ಕಾಯ್ದೆಯನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ‌‌. ಈ ಮೂಲಕ ಹಿರಿಯ ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲೇಬೇಕೆಂದು ಕಾನೂನು ಇದೆ ಎಂದು ಹೇಳಿದರು.

ಹಿರಿಯ ನಾಗರಿಕರಿಗೆ ಶೋಷಣೆ, ಅನಾಥಾಶ್ರಮಗಳಿಗೆ ಸೇರಿಸುವ ಕೃತ್ಯಗಳು ಕಂಡು ಬಂದಲ್ಲಿ ಯುವಕರು ಸಕಾರಾತ್ಮಕವಾಗಿ ಸ್ಪಂದಿಸಿ ಅವರ ರಕ್ಷಣೆಗೆ ಮುಂದಾಗಬೇಕು. ಹಿರಿಯ ನಾಗರಿಕರ ಶೋಷಣೆ, ನಿಂದನೆಗಳಿಗೆ ದಂಡನಾರ್ಹ, ಶಿಕ್ಷಾರ್ಹ ಕಾನೂನುಗಳಿವೆ. ಈ ಕುರಿತು ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ ಎಂದರು.

Edited By :
Kshetra Samachara

Kshetra Samachara

15/06/2022 05:25 pm

Cinque Terre

3.75 K

Cinque Terre

0

ಸಂಬಂಧಿತ ಸುದ್ದಿ