ಕಟಪಾಡಿ: ಅಮ್ಮನಲ್ಲಿ ಬ್ರಹ್ಮನನ್ನು ಕಾಣುವ ಸಂಸ್ಕೃತಿ ನಮ್ಮದು. ಮಾತೃ ಭಕ್ತಿಯು ಪ್ರಥಮ ಭಕ್ತಿಯಾಗಿದೆ. ಮಹಾತ್ಮರೆಲ್ಲರೂ ಮಾತೃ ಭಕ್ತರಾಗಿದ್ದರು ಎಂದು ಕೇಮಾರು ಸಾಂದೀಪನಿ ಸಾಧನಾಶಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.
ಅವರು ನಿನ್ನೆ ಮದರ್ಸ್ ಡೇ ಪ್ರಯುಕ್ತ ಪಾಂಗಾಳ ಆರ್ಯಾಡಿಯಲ್ಲಿ ಆರ್ಯಾಡಿ ಸುಬ್ಬಣ್ಣ ಶೆಟ್ಟಿ ಮನೆ ದಿವಂಗತ ಪಿ.ಕೆ. ಸಂಜೀವ ಶೆಟ್ರ ಪತ್ನಿ ದಿವಂಗತ ಕೃಷ್ಣಿ ಶೆಡ್ತಿ ಇವರ 15ನೇ ವರ್ಷದ ಪುಣ್ಯ ಸಂಸ್ಕರಣ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಪಾಂಗಾಳ ಆರ್ಯಾಡಿ ದಿ. ಪಿ.ಕೆ.ಸಂಜೀವ ಶೆಟ್ಟಿ ಮತ್ತು ದಿ. ಕೃಷ್ಣಿ ಶೆಡ್ತಿ ಗೌರವಾನ್ವಿತ ಬದುಕನ್ನು ಕಟ್ಟಿ ಕೊಂಡಿದ್ದು, ಇಂದು ಅವರ ಮಕ್ಕಳು, ಕುಟುಂಬಿಕರು ಮುಂದುವರಿಸುತ್ತಿರುವುದು ಸಂತಸಕರ ಎಂದು ಶಾಸಕ ಲಾಲಾಜಿ ಮೆಂಡನ್ ಹೇಳಿದರು.
ಈ ಸಂದರ್ಭ ಸಾಧಕರಾದ ಪನ್ನೆಲ್ ಸೋನ್ಸ್ ದಿನಕರ್, ಹರೀಶ್, ಸುಧಾಕರ್ ಬಾಬು ಅವರನ್ನು ಸಮ್ಮಾನಿಸಲಾಯಿತು. ಆಶಕ್ತ 40 ಕುಟುಂಬಗಳಿಗೆ ಧನ ಸಹಾಯ ನೀಡಲಾಯಿತು.
Kshetra Samachara
09/05/2022 05:00 pm