ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ಬದ್ರಿಯಾ ಜುಮ್ಮಾ ಮಸೀದಿಗೆ ಹಿಂದೂ ಕುಶಲಕರ್ಮಿ ಕಾಷ್ಠ ಶಿಲ್ಪ !

ಮಂಗಳೂರು: ರಾಜ್ಯದಲ್ಲಿ ಕೋಮು ವೈಷಮ್ಯ ಅಧಿಕವಾಗುತ್ತಿದೆ‌. ಅದರಲ್ಲೂ ಕೋಮುಸೂಕ್ಷ್ಮ ಪ್ರದೇಶವೆಂದು ದಕ್ಷಿಣ ಕನ್ನಡ ಹಣೆಪಟ್ಟಿ ಕಟ್ಟಿಕೊಂಡಿದೆ. ಆದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಮೆರೆಯುವ ಸಾಕಷ್ಟು ನಿದರ್ಶನಗಳು ಕಂಡು ಬರುತ್ತಲೇ ಇರುತ್ತದೆ.‌ ಇದೀಗ ಹಿಂದೂ ಕುಶಲಕರ್ಮಿಯೋರ್ವರು ಮಸೀದಿಗೆ ಕಾಷ್ಠ ಶಿಲ್ಪ ಮಾಡುವ ಮೂಲಕ ಮತ್ತೊಮ್ಮೆ ಕೋಮು ಸಾಮರಸ್ಯವನ್ನು ಮೆರೆದಿದ್ದಾರೆ.

ಮಂಗಳೂರು ನಗರ ಹೊರವಲಯದ ಮುಲ್ಕಿಯ ಪಕ್ಷಿಕೆರೆಯ ನವೀಕೃತ ‌ಬದ್ರಿಯಾ ಜುಮ್ಮಾ ಮಸೀದಿಗೆ ಹಿಂದೂ ಕುಶಲಕರ್ಮಿಯೋರ್ವರು ಅತ್ಯದ್ಭುತ ವಾಗಿ ಕಾಷ್ಠ ಶಿಲ್ಪವನ್ನು ಮಾಡಿದ್ದಾರೆ. ಹರೀಶ್ ಆಚಾರ್ಯ ನವೀಕೃತ ಮಸೀದಿಗೆ ಇಂಡೋ-ಇಸ್ಲಾಮಿಕ್ ಮಾದರಿಯಲ್ಲಿ ಅದ್ಭುತವಾಗಿ ಕಾಷ್ಠ ಶಿಲ್ಪ ಮಾಡಿದ್ದಾರೆ. ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಈ ಮಸೀದಿ ನವೀಕರಣವಾಗಿದೆ. ಮಸೀದಿಯ ಮರದ ಕೆಲಸಕ್ಕೆ ಮಸೀದಿ ಆಡಳಿತ ಮಂಡಳಿ ಉತ್ತಮ ಕುಶಲ ಕರ್ಮಿಗಳನ್ನು ಹುಡುಕಾಡುತ್ತಿದ್ದರು. ಈ ಸಂದರ್ಭ, ಕಾಪುವಿನ ಮಸೀದಿಯೊಂದಕ್ಕೆ ಕಾಷ್ಠ ಶಿಲ್ಪ ಮಾಡಿರುವ ಹರೀಶ್ ಆಚಾರ್ಯರ ಬಗ್ಗೆ ತಿಳಿದುಕೊಂಡ ಮಸೀದಿ ಆಡಳಿತ ಮಂಡಳಿ ಅವರನ್ನು ಸಂಪರ್ಕಿಸಿ ಮಸೀದಿ ಕಾಷ್ಠ ಶಿಲ್ಪದ ಕೆಲಸ ಮಾಡಿ ಕೊಡುವಂತೆ ಕೇಳಿಕೊಂಡಿದ್ದಾರೆ.‌ ಅದರಂತೆ ಹರೀಶ್ ಆಚಾರ್ಯ ಇದೀಗ ಮಸೀದಿಯಲ್ಲಿ 1 ಸಾವಿರ ಚದರ ಅಡಿಯಲ್ಲಿ ಆಕರ್ಷಕವಾಗಿ ಮರದ ಕೆತ್ತನೆ ಕೆಲಸ ಮಾಡಿದ್ದಾರೆ.

ಹರೀಶ್ ಆಚಾರ್ಯ ಈವರೆಗೆ 25 ಕ್ಕೂ ಅಧಿಕ ದೇವಸ್ಥಾನಗಳ ಮರದ ಕೆತ್ತನೆಯನ್ನು ಮಾಡಿದ್ದಾರೆ. ಒಂದು ಮಸೀದಿ ಕೆತ್ತನೆ ಮಾಡಿದ ಅನುಭವೂ ಹರೀಶ್ ಗೆ ಇದೆ. ಹರೀಶ್ ಇಂಡೋ-ಇಸ್ಲಾಮಿಕ್ ಶೈಲಿಯ ಕಾಷ್ಠ ಶಿಲ್ಪವನ್ನು ಅಧ್ಯಯನ ಮಾಡಿ ಮಾಡಿದ್ದಾರೆ. ತನ್ನ ಸಹೋದರರ ಜೊತೆಗೂಡಿ ಹರೀಶ್ ಮರದ ಕೆತ್ತನೆಯ ಕೆಲಸವನ್ನು ಮಾಡಿದ್ದಾರೆ.

ಒಟ್ಟಿನಲ್ಲಿ ಧರ್ಮ ಧರ್ಮಗಳ ನಡುವೆ ಕೋಮು ವೈಷಮ್ಯವನ್ನು ಬಿತ್ತುವವರ ಮಧ್ಯೆ ಹಿಂದೂ ಕುಶಲಕರ್ಮಿ ಹರೀಶ್ ಆಚಾರ್ಯ ಮಸೀದಿಯ ಕಾಷ್ಠ ಶಿಲ್ಪವನ್ನು ರಚಿಸಿ ಕೋಮು ದ್ವೇಷದ ಉರಿಯನ್ನು ತಣಿಸುವ ಕೆಲಸ ಮಾಡಿದ್ದಾರೆ. ಮಸೀದಿಯ ಆಡಳಿತ ಮಂಡಳಿಯೂ ಹಿಂದೂ ಧರ್ಮೀಯನಿಂದ ಮಸೀದಿ ಕಾಷ್ಠ ಶಿಲ್ಪದ ಕೆಲಸ ಮಾಡಿಸಿ ಉದಾರತೆ ಮೆರೆದಿದೆ.

Edited By :
PublicNext

PublicNext

21/04/2022 05:05 pm

Cinque Terre

76.59 K

Cinque Terre

4

ಸಂಬಂಧಿತ ಸುದ್ದಿ