ಕಾರ್ಕಳ ಪುರಸಭೆ ವ್ಯಾಪ್ತಿಯ ಬಂಡಿ ಮಠ ಮುಖ್ಯ ಬಸ್ ನಿಲ್ದಾಣದ ಎದುರುಗಡೆ ಮಾರ್ಗದಲ್ಲಿ ಪುರಸಭೆ ವತಿಯಿಂದ ತ್ಯಾಜ್ಯ ನೀರಿನ ಕಾರಂಜಿ ಹೊರಹೊಮ್ಮುತ್ತಿದೆ.
ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳಿಗೆ ತ್ಯಾಜ ನೀರಿನ ಅಭಿಷೇಕವಾಗುತ್ತಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಒಳಚರಂಡಿಗಳಲ್ಲಿ ನೀರು ತುಂಬಿ ಮೇಲ್ಮುಖವಾಗಿ ಹರಿಯುತ್ತಿದೆ.
ಇಷ್ಟೆಲ್ಲ ಆದರೂ ಪುರಸಭೆಯವರು ಯಾವುದೇ ಕ್ರಮ ಕೈಗೊಳ್ಳದೆ ಮೌನ ವ್ರತ ಆಚರಿಸಿ 4 ಕಲ್ಲುಗಳನ್ನು ಇಟ್ಟು ತಮ್ಮ ಕರ್ತವ್ಯವನ್ನು ಮೆರೆದಿದ್ದಾರೆ.
Kshetra Samachara
07/07/2022 03:50 pm