ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಬಿಸಿಲು ಮಳೆ ಕಣ್ಣಾಮುಚ್ಚಾಳೆ : ಹೆಚ್ಚಿದ ಶೀತ ಜ್ವರ

ಕಾರ್ಕಳ : ಜಿಲ್ಲೆಯಲ್ಲಿ ಕ್ಷಣಕ್ಕೊಮ್ಮೆ ಮಳೆಯಾಗಿ ಮರು ಕ್ಷಣವೇ ಬಿಸಿಲು ಬೀಳುತ್ತಿದೆ. ಮಳೆ ಬಿಸಿಲಿನಾಟದ ನಡುವೆ ಕಾರ್ಕಳ, ಹೆಬ್ರಿ ತಾಲೂಕಿನ ಹಲವೆಡೆ ಜ್ವರಬಾಧೆ ಕಾಣಿಸಿಕೊಂಡಿದೆ. ವಿವಿಧ ಆಸ್ಪತ್ರೆಗಳಲ್ಲಿ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಶಾಲಾ ಹಾಸ್ಟೆಲ್‌ಗಳಲ್ಲಿರುವವರಲ್ಲೇ ಜ್ವರ ಹೆಚ್ಚಾಗಿ ಕಂಡು ಬಂದಿದೆ.

ಶೀತ, ಜ್ವರ, ಮೈಕೈ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇಲಿಜ್ವರ, ಎಚ್1ಎನ್1, ಮಲೇರಿಯಾ, ಡೆಂಗ್ಯೂ ಕಾಯಿಲೆಗೆ ತುತ್ತಾಗಿರುವವರಲ್ಲಿ ಮೊದಲ ಹಂತದಲ್ಲಿ ಜ್ವರ ಕಾಣಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ವೃದ್ಧಿಸುತ್ತಿದೆ. ವೈದ್ಯಕೀಯ ಪರೀಕ್ಷೆಯ ಮೂಲಕ ತಗಲಿರುವ ಜ್ವರದ ನಿಖರತೆ ಇನ್ನಷ್ಟೇ ತಿಳಿಯಬೇಕಾಗಿದೆ.

Edited By :
Kshetra Samachara

Kshetra Samachara

16/09/2022 03:38 pm

Cinque Terre

7.64 K

Cinque Terre

3

ಸಂಬಂಧಿತ ಸುದ್ದಿ