ಕಾರ್ಕಳ: ತಾಲೂಕಿನ ದುರ್ಗಾ ಗ್ರಾಮದಲ್ಲಿ ಭಾರೀ ಗಾಳಿ ಮಳೆಗೆ ದುರ್ಗಾ, ತೆಳ್ಳಾರು, ಕುಕ್ಕಾಜೆಪಲ್ಕೆ ಪರಿಸರದ ಮನೆಗಳ ಮೇಲ್ಛಾವಣಿಗೆ ಸಂಪೂರ್ಣ ಹಾನಿಯಾಗಿದೆ. ರಿಯಾಜ್, ಮಹಮ್ಮದ್ ಹುಸೇನ್ ಹಾಗೂ ವಸಂತಿ ಎಂಬವರ ಮನೆಗಳು ಭಾಗಶಃ ಹಾನಿಗೀಡಾಗಿವೆ. ಮನೆಗಳಲ್ಲದೆ ಕೃಷಿ ಜಮೀನಿಗೂ ಅಪಾರ ಹಾನಿಯಾಗಿದೆ. ಹಲವೆಡೆ ಕೊಟ್ಟಿಗೆಯ ತಗಡು ಶೀಟುಗಳು ಹಾಗೂ ಹೆಂಚು ಹಾರಿ ಹೋಗಿದ್ದು, ಅಡಿಕೆ ಹಾಗೂ ತೆಂಗಿನ ಮರಗಳು, ವಿದ್ಯುತ್ ಕಂಬಗಳು ನೆಲಕಚ್ಚಿದ್ದು ಲಕ್ಷಾಂತರ ರೂ.ನಷ್ಟ ಸಂಭವಿಸಿದೆ.
ಸ್ಥಳಕ್ಕೆ ಕಾರ್ಕಳ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಪಂಚಾಯತ್ ಅಧ್ಯಕ್ಷ ಸತೀಶ್ ನಾಯಕ್, ಉಪಾಧ್ಯಕ್ಷೆ ಸುಶೀಲಾ, ಸದಸ್ಯೆ ದೇವಕಿ, ರಾಜೇಶ್ ಗೋರೆ, ಮಾಜಿ ಅಧ್ಯಕ್ಷ ದಿನೇಶ್ ನಾಯಕ್, ಸತ್ಯನಾರಾಯಣ ಪಡೆ ಕಂದಾಯ ನಿರೀಕ್ಷಕ ಶಿವಪ್ರಸಾದ್ ರಾವ್, ಗ್ರಾಮಕರಣಿಕರಾದ ಮೇಘನಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನು ಹೆಬ್ರಿಯ ಕುಚ್ಚೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳಂಜೆ ತಾರಿಗದ್ದೆ ಎಂಬಲ್ಲಿ ಭಾಸ್ಕರ್ ಶೆಟ್ಟಿ ಎಂಬವರ ಮನೆಯ ಮೇಲೆ ಮರ ಬಿದ್ದು ಮನೆ ಭಾಗಶಃ ಹಾನಿಗೀಡಾಗಿದೆ. ಮನೆಯ ಹೆಂಚುಗಳು ಹಾರಿ ಹೋಗಿದ್ದು, ಅಡಿಕೆ ಮರಗಳು ಕೂಡ ನೆರಕ್ಕುರುಳಿವೆ. ಇದರಿಂದಾಗಿ ಸುಮಾರು 2 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
Kshetra Samachara
13/09/2022 10:42 pm