ಸುಳ್ಯ: ಮಡಿಕೇರಿ ರಸ್ತೆಯ ಮದೆನಾಡಿನಲ್ಲಿ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಗುಡ್ಡದಿಂದ ಜಾರಿ ರಸ್ತೆ ಬದಿಗೆ ಬಂದಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಮದೆನಾಡಿನಲ್ಲಿ ಗುಡ್ಡದಿಂದ ಭಾರೀ ಪ್ರಮಾಣದ ಮಣ್ಣು ಕುಸಿದು ರಸ್ತೆಗೆ ಬೀಳುವ ಸಂಭವವಿದ್ದು, ಕಳೆದೆರಡು ದಿನಗಳಿಂದ ಈ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸಿ, ಕೊಡಗು ಜಿಲ್ಲಾಧಿಕಾರಿ ಡಾ. ಸತೀಶ್ ಅವರು ಆದೇಶ ಹೊರಡಿಸಿದ್ದರು. ಇದೀಗ ಗುಡ್ಡದಿಂದ ಕುಸಿದು ರಸ್ತೆಗೆ ಬಂದಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ.
Kshetra Samachara
11/08/2022 08:25 pm