ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಪ್ರಕೃತಿ ವಿಕೋಪ: ಆರಂಭದಲ್ಲೇ ಮೀನುಗಾರಿಕೆಗೆ ವಿಘ್ನ

ವರದಿ: ರಹೀಂ ಉಜಿರೆ

ಮಲ್ಪೆ: ಮಳೆಗಾಲದ ನಿಷೇಧ ಅವಧಿ ಮುಗಿದು ಇನ್ನೇನು ಮೀನುಗಾರರು ಕಡಲಿಗೆ ಇಳಿಯುವ ಹೊತ್ತಿಗೆ ಪ್ರಕೃತಿ ಮುನಿದಿದೆ. ಕಳೆದ ನಾಲ್ಕು ದಿನಗಳ ಭಾರೀ ಮಳೆಯಿಂದಾಗಿ ಮೀನುಗಾರರಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಮೀನುಗಾರಿಕೆ ಬೋಟ್‌ಗಳ ರಿಪೇರಿ ಕೆಲಸ ಮುಗಿಸಿ, ಬಲೆ ಜೋಡಿಸಿ, ಮಂಜುಗಡ್ಡೆ ತುಂಬಿಸುವ ಕೆಲಸ ಮಾಡಲಾಗುತ್ತದೆ.ಇವೆಲ್ಲ ಕೆಲಸ ಜುಲೈ ಅಂತ್ಯದ ಹೊತ್ತಿಗೆ ಮುಗಿಯುತ್ತದೆ. ಹೀಗೆ ಎಲ್ಲ ಸಿದ್ಧತೆ ಮಾಡಿಕೊಂಡು ಆಗಸ್ಟ್ ಮೊದಲ ವಾರಕ್ಕೆ ಒಂದೊಂದಾಗಿ ಬೋಟುಗಳು ಕಡಲಿಗಿಳಿಯುವುದು ವಾಡಿಕೆ. ಆದರೆ ಮುಂಗಾರು ಮತ್ತೆ ಮುನಿಸಿಕೊಂಡಿರುವ ಪರಿಣಾಮ, ಮಂಜುಗಡ್ಡೆ ತುಂಬಿಸಿ ಕಡಲಿಗಿಳಿಯಬೇಕಿದ್ದ ಮೀನುಗಾರರು ಮತ್ತೆ ಮಳೆ ಕಡಿಮೆಯಾಗುವತನಕ ಕಾಯಬೇಕಿದೆ.

ಮಲ್ಪೆ ಬಂದರಿನಲ್ಲಿ ಸುಮಾರು 1500ಕ್ಕೂ ಅಧಿಕ ಯಾಂತ್ರೀಕೃತ ಬೋಟ್‌ಗಳಿವೆ. ಇವನ್ನು ಆಯಾ ಬೋಟ್‌ಗಳ ಮಾಲೀಕರು ಸನ್ನದ್ಧಗೊಳಿಸಿ ಹೊರಡುವಾಗಲೇ ವಿಘ್ನ ಎದುರಾಗಿದೆ. ಕಳೆದ ಮೂರು ದಿನಗಳಿಂದ ರೆಡ್ ಅಲರ್ಟ್ ಇದ್ದು ಈ ಅವಧಿಯಲ್ಲಿ ಮೀನುಗಾರರು ಕಡಲಿಗೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಇನ್ನು ನಾಳೆ ನಾಡಿದ್ದು ಆರೆಂಜ್ ಅಲರ್ಟ್ ಇದ್ದು ಮಳೆ ಕಡಿಮೆಯಾಗುವ ಸಾಧ್ಯತೆ ಇದೆ. ಒಂದು ವಾರದ ಮೀನುಗಾರಿಕೆ ಈಗಾಗಲೇ ನಷ್ಟವಾಗಿದೆ. ಮುಂದಿನ ವಾರ ಮಳೆಯ ತೀವ್ರತೆಯನ್ನು ಆಧರಿಸಿ ಮೀನುಗಾರರು ಕಡಲಿಗೆ ಇಳಿದು ಪೂರ್ಣಪ್ರಮಾಣದಲ್ಲಿ ಮೀನುಗಾರಿಕೆಯಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ.

Edited By :
Kshetra Samachara

Kshetra Samachara

06/08/2022 03:25 pm

Cinque Terre

7.32 K

Cinque Terre

0

ಸಂಬಂಧಿತ ಸುದ್ದಿ