ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣದ ಸಮೀಪದ ಮಿಷನ್ ಕಂಪೌಂಡ್ ಬಳಿ ಹೆದ್ದಾರಿ ಸರ್ವಿಸ್ ರಸ್ತೆಗೆ ಗುಡ್ಡ ಕುಸಿತವಾಗಿ ಅಪಾಯಕಾರಿಯಾಗಿ ಪರಿಣಮಿಸಿದ್ದರೂ ಸಂಬಂಧಪಟ್ಟ ಇಲಾಖೆ ನಿರ್ಲಕ್ಷ ವಹಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಲ್ಕಿ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆ ಮಿಷನ್ ಕಾಂಪೌಂಡ್ ಬಳಿ ಕಳೆದ ಒಂದು ತಿಂಗಳಿನಿಂದ ಮಳೆಗಾಲ ಶುರುವಾದ ಬಳಿಕ ಎರಡೆರಡು ಕಡೆ ಗುಡ್ಡ ಕುಸಿತವಾಗುತ್ತಿದೆ.
ಗುಡ್ಡ ಕುಸಿತದ ಬಳಿಯ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಅನೇಕ ಅಪಾಯಕಾರಿ ಮರಗಳಿದ್ದು ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ. ಸರ್ವಿಸ್ ರಸ್ತೆಯಲ್ಲಿ ಶಾಲಾ ಮಕ್ಕಳ ವಾಹನ ಸಹಿತ ಜನನಿಬಿಡ ಸಂಚಾರವಿದೆ.
ಅಪಾಯ ಸಂಭವಿಸುವ ಮೊದಲೇ ಹೆದ್ದಾರಿ ಇಲಾಖೆ ಅಧಿಕಾರಿಗಳು ಕೂಡಲೇ ಈ ಬಗ್ಗೆ ಸೂಕ್ತ ಗಮನ ಹರಿಸಬೇಕು ಎಂದು ಆಟೋ ಚಾಲಕ ಮೋಹನ್ ಕುಬೆವೂರು ಒತ್ತಾಯಿಸಿದ್ದಾರೆ.
Kshetra Samachara
19/07/2022 01:40 pm