ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: : ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ: ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ್ದ ಮರದ ದಿಮ್ಮಿ, ಕಸಕಡ್ಡಿ ತೆರವು

ಬಾರಕೂರು: ಬಾರಕೂರು ಸಮೀಪದ ಸೀತಾನದಿಗೆ ನೀಲಾವರದಲ್ಲಿ ಕಟ್ಟಲಾದ ಕಿಂಡಿ ಅಣೆಕಟ್ಟಿನಲ್ಲಿ ಭಾರೀ ಮಳೆಯಿಂದಾಗಿ ಮರದ ದಿಮ್ಮಿಗಳು ಸಿಲುಕಿಕೊಂಡು ಕೃತಕ ಪ್ರವಾಹ ಉಂಟಾಗಿತ್ತು. ಮಾತ್ರವಲ್ಲ ಇದರಿಂದಾಗಿ ಸ್ಥಳೀಯ ಕೃಷಿಕರಿಗೆ ಸಾಕಷ್ಟು ತೊಂದರೆಯಾಗಿತ್ತು.

ಈ ಕುರಿತು ಗುರುವಾರ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಕಟಿಸಿತ್ತು. ಇದೀಗ ಎಚ್ಚೆತ್ತಿರುವ ಸ್ಥಳೀಯಾಡಳಿತ ಅಣೆಕಟ್ಟಿನಲ್ಲಿ ಸಿಲುಕಿರುವ ಮರ ಮತ್ತು ಕಸಕಡ್ಡಿಗಳನ್ನು ತೆರವು ಮಾಡುತ್ತಿದೆ. ಅಣೆಕಟ್ಟಿನಲ್ಲಿ ಆಗುವ ಇಂತಹ ಸಮಸ್ಯೆಗಳನ್ನು ಪಂಚಾಯತ್ ಬಗೆಹರಿಸಲು ಬರುವುದಿಲ್ಲ. ಆಕಸ್ಮಿಕವಾಗಿ ಆಗುವ ಈ ಅವಾಂತರಕ್ಕೆ ನೀರಾವರಿ ಇಲಾಖೆ ಪ್ರತ್ಯೇಕ ಹಣವನ್ನು ಮೀಸಲಿಡಬೇಕು.

ಕಿಂಡಿ ಅಣೆಕಟ್ಟು ನಿರ್ಮಿಸಿ ಬಳಿಕ ಅದನ್ನು ಮರೆತೇ ಬಿಡುವ ಪ್ರಸಂಗ ಜಿಲ್ಲೆಯ ಎಲ್ಲೆಡೆ ನಡೆಯುತ್ತಿದೆ. ಮಳೆಗಾಲಕ್ಕೆ ಇಲ್ಲಿ ಆಗುವ ಇಂತಹ ಅವಾಂತರಗಳನ್ನು ಸರಿಪಡಿಸುವವರಾರು? ಈ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ಕೇವಲ ಕಿಂಡಿ ಅಣೆಕಟ್ಟು ನಿರ್ಮಿಸಿ ಮರೆತುಬಿಡದೆ, ಅದರ ನಿರ್ವಹಣೆಯ ಜವಾಬ್ದಾರಿಯನ್ನೂ ವಹಿಸಿಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Edited By :
PublicNext

PublicNext

16/07/2022 03:29 pm

Cinque Terre

40.02 K

Cinque Terre

1

ಸಂಬಂಧಿತ ಸುದ್ದಿ