ಪಡುಬಿದ್ರಿ: ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಕಾಪು ತಾಲೂಕಿನ ವಿವಿಧೆಡೆ ಮನೆಗಳಿಗೆ ಹಾನಿಯಾಗಿದೆ. ಹೆಜಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಜಮಾಡಿ ಕೋಡಿ ಪಾರ್ವತಿ ಪುತ್ರನ್ ಅವರ ಮನೆಗೆ ತೆಂಗಿನಮರ ಬಿದ್ದು ಭಾಗಶಃ, ಹಾನಿಯಾಗಿದೆ. ಶಿರ್ವ ಗ್ರಾಮದ ಮುರುಗೇಶ್ ಮನೆ ಸಂಪೂರ್ಣ ಹಾನಿಗೊಳಗಾಗಿದೆ.
ಇನ್ನು ಮೂಡುಬೆಟ್ಟು ಗ್ರಾಮದ ಮೇರಿ ಮೆಂಡೋನ್ಸ, ಇದೇ ಗ್ರಾಮದ ಸುಧಾಕರ ಆಚಾರ್ಯ, ಏಣಗುಡ್ಡೆ ಗ್ರಾಮದ ಸಾವಿತ್ರಿ ಆಚಾರ್ಯ ಅವರ ಮನೆಗಳು ಹಾನಿಗೊಳಗಾಗಿವೆ. ಹೆಜಮಾಡಿ ಕೋಡಿ ಪಾರ್ವತಿ ಮನೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಂಡುರಂಗ ಕರ್ಕೇರ, ಉಪಾಧ್ಯಕ್ಷೆ ಪವಿತ್ರಾ ಗಿರೀಶ್, ಗ್ರಾಮ ಕರಣಿಕ ಶ್ರೀಕಾಂತ್, ಮಾಜಿ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ, ಸದಸ್ಯರಾದ ಸುಜಾತಾ, ನಳಿನಾಕ್ಷಿ, ಶರಣ್ ಕುಮಾರ್ ಮಟ್ಟು ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Kshetra Samachara
12/07/2022 11:36 am