ಮುಲ್ಕಿ: ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ಟೆಯಿಂದ ಏಳಿಂಜೆ ಮುಖ್ಯರಸ್ತೆಗೆ ಸಮೀಪದ ಕಾಲುದಾರಿಯ ಕಿರುಸೇತುವೆ ಕುಸಿದು ಕೆಲ ವರ್ಷಗಳಾದರೂ ನೂತನ ಸೇತುವೆ ನಿರ್ಮಾಣ ಇನ್ನೂ ಕಾರ್ಯಗತಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏಳಿಂಜೆ, ದಾಮಸ್ ಕಟ್ಟೆಗೆ ಶಾಲೆಗೆ ಬರುವ ಮಕ್ಕಳು ಇದೇ ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಬರುತ್ತಿದ್ದು, ಭಾರಿ ಮಳೆ ಬಂದರೆ ಸಾಕು ಸೇತುವೆ ಕುಸಿತದಿಂದ ಸುತ್ತು ಬಳಸಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಬಂದಿದೆ. ಈ ನಡುವೆ ಕುಸಿತವಾದ ಸೇತುವೆಯ ಇನ್ನೊಂದು ಪಾರ್ಶ್ವ ಜಲಾವೃತವಾಗಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ.
ಕಳೆದ 4 ವರ್ಷಗಳಿಂದ ಕಿರುಸೇತುವೆ ನಿರ್ಮಾಣಕ್ಕೆ ಸ್ಥಳೀಯ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಕಾರ್ಯಗತಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಇಲಾಖೆಯು ನೂತನ ಕಿರು ಸೇತುವೆ ನಿರ್ಮಿಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
Kshetra Samachara
05/07/2022 10:27 pm