ಹೆಬ್ರಿ: ಹೆಬ್ರಿ ತಾಲೂಕಿನಾದ್ಯಂತ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೃಷಿಗೆ ಅಪಾರ ನಷ್ಟ ಉಂಟಾಗಿದೆ. ಶಿವಪುರ, ವರಂಗ, ಸೀತಾನದಿ, ಬಚ್ಚಪ್ಪು, ಜರವತ್ತು ನದಿಗಳು ತುಂಬಿ ಹರಿಯುತ್ತಿರುವ ಪರಿಣಾಮ ಗದ್ದೆಗಳು ಜಲಾವೃತಗೊಂಡಿವೆ. ಶಿವಪುರ ಹಾಗೂ ವರಂಗದಲ್ಲಿ ಅಡಿಕೆ ತೋಟಕ್ಕೆ ನೀರು ನುಗ್ಗಿದ್ದು ಭತ್ತ ನಾಟಿಗೆ ಕೂಡ ಸಮಸ್ಯೆಯಾಗಿದೆ. ಶಿವಪುರ, ಖಜಾನೆ ಹಾಗೂ ಕುಚೂರು ಸಹಿತ ವಿವಿಧೆಡೆ ವಿದ್ಯುತ್ ಸರಬರಾಜು ಕಡಿತಗೊಂಡಿದೆ.
ತಾಲೂಕಿನ ಕುಡಿಬೈಲ್ ಪ್ರದೇಶದಲ್ಲಿ ಬೈಲ್ ಪ್ರದೇಶವು ಸಂಪೂರ್ಣ ಜಲಾವೃತಗೊಂಡು ದೊಡ್ಡ ನದಿಯಂತೆ ಕಾಣುತ್ತಿದೆ. ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಸಮಸ್ಯೆಯಾಗಿದೆ. ನಾಡ್ಪಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಂಗಳೆ ಗರಡಿ ಬಳಿ ಸಂಪರ್ಕ ಸೇತುವೆ ಮುಳುಗಡೆಯಾಗಿ ಜನರ ಸಂಚಾರಕ್ಕೆ ತೊಡಕಾಗಿದೆ.ಕೃಷಿಭೂಮಿಗೆ ನೀರು ನುಗ್ಗಿದ್ದರಿಂದಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
Kshetra Samachara
05/07/2022 12:45 pm