ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಅರ್ಧಂಬರ್ಧ ಹೆದ್ದಾರಿ ಕಾಮಗಾರಿ; ಮನೆಗೆ ನುಗ್ಗಿದ ಮಳೆನೀರು

ಕಾಪು: ಉಡುಪಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ಹಲವು ಅವ್ಯವಸ್ಥೆಗಳಿಂದ ಕೂಡಿದೆ. ಇದರ ದುಷ್ಪರಿಣಾಮ ಮಳೆಗಾಲದಲ್ಲಿ ಜೋರು. ಇದೀಗ ಹೆದ್ದಾರಿ ಇಲಾಖೆ ಸರ್ವಿಸ್ ರಸ್ತೆ ಕಾಮಗಾರಿಯನ್ನು ಆಮೆಗತಿಯಲ್ಲಿ ಮಾಡುತ್ತಿರುವ ಪರಿಣಾಮವಾಗಿ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ನಿವಾಸಿ ಪ್ರಕಾಶ್ ದೇವಾಡಿಗ ಅವರ ಮನೆಗೆ ಕೃತಕ ನೆರೆ ನೀರು ನುಗ್ಗಿದೆ.

ಉಚ್ಚಿಲ ಪೆಟ್ರೋಲ್ ಬಂಕ್ ನಿಂದ ಪೋಸ್ಟ್ ಆಫೀಸ್ ವರೆಗೆ ಎರಡು ಕಿಲೋಮೀಟರ್ ಉದ್ದದ ಸರ್ವಿಸ್ ರಸ್ತೆ ನಿರ್ಮಾಣ ಆಗುತ್ತಿದ್ದು, ಕಳೆದ ಒಂದು ವರ್ಷದಿಂದಲೂ ಎರಡು ಕಿಲೋಮೀಟರ್ ಸರ್ವಿಸ್ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ! ಹೆದ್ದಾರಿಯ ಇಕ್ಕೆಲ ಗುತ್ತಿಗೆದಾರರು ಅಗೆದಿದ್ದು, ಮಳೆನೀರು ಸಾಗುವ ಹಾದಿಯನ್ನು ಮುಚ್ಚಲಾಗಿದೆ. ಇದರಿಂದ ಹೆದ್ದಾರಿ ಪಕ್ಕದ ಮನೆಗಳಿಗೆ ನೀರು ನುಗ್ಗುತ್ತಿದೆ.

ಮಾತ್ರವಲ್ಲ, ಕಾಮಗಾರಿ ಪೂರ್ಣಗೊಳಿಸದ ಕಾರಣ ಹೆದ್ದಾರಿ ಪಕ್ಕದಲ್ಲಿ ಸಂಚರಿಸುವವರಿಗೂ ಅಪಾಯ ಭೀತಿ ಕಾಡುತ್ತಿದೆ.

ಈ ಬಗ್ಗೆ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಬಂದು ಅವ್ಯವಸ್ಥೆಯನ್ನು ಸರಿ ಪಡಿಸಬೇಕಿದೆ.

Edited By : Shivu K
Kshetra Samachara

Kshetra Samachara

23/06/2022 11:38 am

Cinque Terre

4.92 K

Cinque Terre

0

ಸಂಬಂಧಿತ ಸುದ್ದಿ