ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಮಂತೂರು: ಮಜಲಗುತ್ತು ಅಣೆಕಟ್ಟು ಬಳಿ ತೋಡಿಗೆ ಬಿದ್ದು ತಡೆಯಾಗಿದ್ದ ಬೃಹದಾಕಾರದ ಮರ ತೆರವು

ಮುಲ್ಕಿ: ಅತಿಕಾರಿಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಶಿಮಂತೂರು ಮಜಲಗುತ್ತು ಅಣೆಕಟ್ಟು ಬಳಿ ತೋಡಿಗೆ ಬಿದ್ದು ನೀರಿನ ಹರಿವಿಗೆ ತಡೆಯಾಗಿದ್ದ ಬೃಹದಾಕಾರದ ಮರವನ್ನು ಪಂಚಾಯತ್ ಅಧ್ಯಕ್ಷ ಮನೋಹರ ಕೋಟ್ಯಾನ್ ವಿನಂತಿ ಮೇರೆಗೆ ಯುವಕ ಮಂಡಲದ ಸದಸ್ಯರು ಹಾಗೂ ಸ್ಥಳೀಯ ಕೃಷಿಕರು ಶ್ರಮದಾನದ ಮೂಲಕ ತೆರವುಗೊಳಿಸಿದ್ದಾರೆ.

ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸುವ ಮಜಲಗುತ್ತು ಅಣೆಕಟ್ಟು ಬಳಿಯ ತೋಡಿಗೆ ಬೃಹದಾಕಾರದ ಆಲದಮರ ಬಿದ್ದಿದ್ದು ನೀರು ಸರಾಗವಾಗಿ ಹರಿಯದೇ ತೊಂದರೆಯಾಗಿತ್ತು. ಈ ಬಗ್ಗೆ ಸ್ಥಳೀಯ ಕೃಷಿಕರು ಪಂಚಾಯಿತಿ ಸದಸ್ಯೆ ಪದ್ಮಿನಿ ಶೆಟ್ಟಿ ನೇತೃತ್ವದಲ್ಲಿ ಪಂಚಾಯಿತಿಗೆ ದೂರು ನೀಡಿದ್ದರು.

ಕೂಡಲೇ ಕಾರ್ಯಪ್ರವೃತ್ತರಾದ ಅಧ್ಯಕ್ಷ ಮನೋಹರ ಕೋಟ್ಯಾನ್ ಸ್ಥಳಕ್ಕೆ ಭೇಟಿ ನೀಡಿ ಶಿಮಂತೂರು ಯುವಕ ಮಂಡಲ ಸದಸ್ಯರ ಶ್ರಮದಾನದ ಮೂಲಕ ಬೃಹದಾಕಾರದ ಮರವನ್ನು ತೆರವುಗೊಳಿಸಲಾಯಿತು.

ಈ ಸಂದರ್ಭ ಅತಿಕಾರಿಬೆಟ್ಟು ಗ್ರಾ.ಪಂ ಮಾಜಿ ಸದಸ್ಯ ಹರೀಶ್ ಶೆಟ್ಟಿ, ಯುವಕ ಮಂಡಲದ ಅಧ್ಯಕ್ಷ ಕಿಶೋರ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತರಾದ ದಿನೇಶ್ಚಂದ್ರ ಅಜಿಲ, ದಿವಾಕರ ಶೆಟ್ಟಿ,ಸುಕೇಶ್ ಶೆಟ್ಟಿ, ಸದಸ್ಯರಾದ ಶರತ್, ದೀಪಕ್ ಕುಮಾರ್, ಕಿಶೋರ್ ಪರೆಂಕಿಲ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

19/06/2022 02:47 pm

Cinque Terre

5.91 K

Cinque Terre

0

ಸಂಬಂಧಿತ ಸುದ್ದಿ