ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಡಲ ಕಿನಾರೆಯಲ್ಲಿ ಪತ್ತೆಯಾದ ತ್ಯಾಜ್ಯ ಜಿಡ್ಡು ತನಿಖೆಗೆ ಎನ್ ಜಿಟಿಯಿಂದ ಸಮಿತಿ ನಿಯೋಜನೆ

ಮಂಗಳೂರು: ನಗರದ ಸುರತ್ಕಲ್ ದೊಡ್ಡಕೊಪ್ಪಲು ಬಳಿಯ ಕಡಲ ಕಿನಾರೆಯಲ್ಲಿ ತ್ಯಾಜ್ಯ ಜಿಡ್ಡು ಪತ್ತೆಯಾಗಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್ ಜಿಟಿ) ಪ್ರಧಾನ ಪೀಠವು ಈ ಮಾಲಿನ್ಯದ ಮೂಲ ಪತ್ತೆ ಮಾಡಲು ಸಮಿತಿಯನ್ನು ನಿಯೋಜನೆ ಮಾಡಿದೆ.

ಸಮುದ್ರ ಕಿನಾರೆಯಲ್ಲಿ ತ್ಯಾಜ್ಯ ಜಿಡ್ಡು ತೇಲಿ ಬಂದಿರುವುದಲ್ಲದೆ, ಟಾರಿನ ಉಂಡೆಗಳು ದೊರಕಿತ್ತು. ಅಲ್ಲದೆ ಕೂಳೂರಿನ ಫಲ್ಗುಣಿ ನದಿಯಲ್ಲಿ ಏಕಾಏಕಿ ಪಂಜರಮೀನು ಕೃಷಿಯ ಮೀನುಗಳ ಮಾರಣಹೋಮ ನಡೆದಿತ್ತು. ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿರುವ ಎನ್ ಜಿಟಿಯು ಸಮಿತಿಯೊಂದನ್ನು ನಿಯೋಜನೆ ಮಾಡಿದೆ. ಈ ಸಮಿತಿಯು 2 ವಾರಗಳೊಳಗೆ ಸಭೆ ಸೇರಿ ಸ್ಥಳ ಸಮೀಕ್ಷೆ ನಡೆಸಬೇಕು. ಸ್ಥಳೀಯರೊಂದಿಗೆ ಚರ್ಚೆ ನಡೆಸಿ, ಅಧ್ಯಯನ ನಡೆಸಿ ಎನ್ ಜಿಟಿಗೆ 2ತಿಂಗಳೊಳಗೆ ವರದಿ ಸಲ್ಲಿಸಬೇಕು.

ಕೇಂದ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ದ.ಕ.ಜಿಲ್ಲಾಧಿಕಾರಿ, ಕೋಸ್ಟ್ ಗಾರ್ಡ್ ನ ಮಂಗಳೂರು ಘಟಕ, ಕೇಂದ್ರೀಯ ಮೀನು ಸಂಶೋಧನಾ ಸಂಸ್ಥೆ ಹಾಗೂ ಚೆನ್ನೈನ ಸಾಗರ ಅಭಿವೃದ್ಧಿ ವಿಭಾಗದವರು ಸಮಿತಿಯಲ್ಲಿದ್ದಾರೆ. ಎನ್ ಜಿಟಿ ಅಧ್ಯಕ್ಷ ಆದರ್ಶ ಕುಮಾರ್ ಗೋಯಲ್, ಸದಸ್ಯ ಸುಧೀರ್ ಅಗರ್ ವಾಲ್ ಹಾಗೂ ತಜ್ಞರಾದ ಎ.ಸೆಂಥಿಲ್ ವೇಲ್ ಅವರನ್ನು ಒಳಗೊಂಡ ಪೀಠ ಈ ಆದೇಶವನ್ನು ಹೊರಡಿಸಿದೆ.

Edited By :
Kshetra Samachara

Kshetra Samachara

27/05/2022 10:49 am

Cinque Terre

9.24 K

Cinque Terre

0

ಸಂಬಂಧಿತ ಸುದ್ದಿ