ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಭಾರೀ ಮಳೆಗೆ ಹೆದ್ದಾರಿ ಜಲಾವೃತ

ವಿಟ್ಲ: ಸಂಜೆ ವೇಳೆ ಸುರಿದ ಭಾರೀ ಮಳೆಗೆ ವಿಟ್ಲ-ಮಂಗಳೂರು ರಸ್ತೆಯ ಬೊಬ್ಬೆಕೇರಿ ಹೆದ್ದಾರಿಯಲ್ಲಿ ನೆರೆ ನೀರು ಬಂದು ಜನಜೀವನ ಅಸ್ತವ್ಯಸ್ತಗೊಂಡಿದೆ.

ವಿಟ್ಲ-ಮಂಗಳೂರು ರಸ್ತೆಯಲ್ಲಿ ಖಾಸಗಿ ವ್ಯಕ್ತಿಗಳು ಕಾಮಗಾರಿ ನಡೆಸಿದ್ದರಿಂದ ಚರಂಡಿಗಳಲ್ಲಿ ನೀರು ಹರಿಯಲು ಸರಿಯಾದ ವ್ಯವಸ್ಥೆ ಇಲ್ಲವಾಗಿದೆ. ಇದರಿಂದ ಸಂಜೆ ವೇಳೆ ಸುರಿದ ಮಳೆಯಿಂದ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದೆ. ಆಟೋ ರಿಕ್ಷಾ ಮತ್ತು ಕಾರು ಅರ್ಧದಷ್ಟು ಮುಳುಗಡೆಯಾಗಿದೆ.

ವಿಟ್ಲ ಪಟ್ಟಣ ಪಂಚಾಯತ್ ಪೂರ್ವ ಕಾಮಗಾರಿ ನಡೆಸದ ಕಾರಣ ಈ ರೀತಿಯ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಸ್ಥಳೀಯರು ದೂರಿದ್ದಾರೆ.

Edited By : Manjunath H D
Kshetra Samachara

Kshetra Samachara

16/05/2022 09:05 pm

Cinque Terre

17.91 K

Cinque Terre

0

ಸಂಬಂಧಿತ ಸುದ್ದಿ