ಮಂಗಳೂರು: ಇಂದು ಬೆಳಗ್ಗೆ ನಗರದಲ್ಲಿ ಗುಡುಗು ಸಹಿತ ಅಕಾಲಿಕ ಮಳೆಯಿಂದಾಗಿ ಅಂಗಡಿಗಳಿಗೆ ನೀರು ನುಗ್ಗಿ ಹಂಪನಕಟ್ಟೆ ಬಳಿ ಇರುವ ಗಿಫ್ಟ್ ಸೆಂಟರ್ ಒಂದರ ಗಿಫ್ಟ್ ಐಟಂಗಳು ನೀರಿನಲ್ಲಿ ತೇಲಿ ಹೋದವು!
ಅವೈಜ್ಞಾನಿಕ ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ಈ ಅವಾಂತರ ಸೃಷ್ಟಿಯಾಗಿದೆ. ಗಲ್ಲಿ ಟ್ರಾಪ್ ಮೂಲಕ ಚರಂಡಿ ಸೇರಬೇಕಿದ್ದ ಮಳೆನೀರು, ಗಿಫ್ಟ್ ಸೆಂಟರ್ ಗೆ ನುಗ್ಗಿತ್ತು.
ಗಿಫ್ಟ್ ಸೆಂಟರ್ ನಲ್ಲಿ ಮೊಣಕಾಲ ವರೆಗೂ ನೀರು ನಿಂತಿದ್ದು, ಅಂಗಡಿಯವರು ಬಕೆಟ್ ನಿಂದ ನೀರನ್ನು ಹೊರ ಚೆಲ್ಲುವ ದೃಶ್ಯ ಕಂಡು ಬಂತು. ಗಿಫ್ಟ್, ಫ್ಯಾನ್ಸಿ ವಸ್ತುಗಳು ನೀರಿನಿಂದಾಗಿ ಹಾನಿಗೀಡಾಗಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.
Kshetra Samachara
09/03/2022 03:03 pm