ಮುಲ್ಕಿ:ಕಿನ್ನಿಗೋಳಿ ಪಟ್ಟಣ ಪಂಚಾಯತ್ ನಿಂದ ನೂತನ ಸಾವಯವ ಗೊಬ್ಬರ ಕಿನ್ನಿಗೋಳಿ ಗೋಲ್ಡ್ ಹೆಸರಿನೊಂದಿಗೆ ಬಿಡುಗಡೆಯಾಗಲಿದ್ದು ಕಸದಿಂದ ರಸ ಎಂಬಂತೆ ಉತ್ತಮ ಗೊಬ್ಬರ ಉತ್ಪಾದನೆ ಮೂಲಕ ಸಾಧನೆ ಮಾಡಿದೆ.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಸವನ್ನು ಸಂಗ್ರಹಿಸಲಾಗುತ್ತಿದ್ದು ಎರಡು ವಾಹನಗಳಲ್ಲಿ ದಿನಕ್ಕೆ 4 ಲೋಡ್ ನಷ್ಟು ಕಸ ಸಂಗ್ರಹವಾಗುತ್ತಿದ್ದು ತ್ಯಾಜ್ಯ ಘಟಕಕ್ಕೆ ತಂದು ಹಸಿ ಕಸ ಮತ್ತು ಒಣ ಕಸಗಳಾಗಿ ವಿಂಗಡಿಸಲಾಗುತ್ತದೆ, ಪ್ಲಾಸ್ಟಿಕ್ ಗಾಜು ಮತ್ತಿತರ ವಸ್ತುಗಳನ್ನು ಬೇರ್ಪಡಿಸಿ ಇಡಲಾಗುತ್ತದೆ, ಕೊಳೆತ ತರಕಾರಿ, ಹಣ್ಣು ಹಂಪಲುಗಳು ಮತ್ತಿತರ ಹಸಿ ಕಸಗಳನ್ನು ಘಟಕದಲ್ಲಿ ಸಾವಯವ ಗೊಬ್ಬರವನ್ನಾಗಿ ಮಾಡಲಾಗುತ್ತದೆ.
ಈ ಬಗ್ಗೆ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಾಯಿಶ್ ಚೌಟ ಮಾತನಾಡಿ ಗೊಬ್ಬರವನ್ನು ಅಗತ್ಯ ವಿದ್ದವರಿಗೆ ಮಾರಾಟ ಮಾಡಲಾಗುತ್ತಿದ್ದು ಮುಂದಿನ ವಾರದಿಂದ ಕಿನ್ನಿಗೋಳಿ ಗೋಲ್ಡ್ ಹೆಸರಿನೊಂದಿಗೆ ಮಾರಾಟ ಮಾಡಲಾಗುತದೆ ಶಾಸಕ ಉಮಾನಾಥ ಕೋಟ್ಯಾನ್ ಮುಂದಿನ ದಿನಗಳಲ್ಲಿ ನೂತನ ಬ್ರಾಂಡ್ ಬಿಡುಗಡೆ ಮಾಡಲಿದ್ದಾರೆ
ಕಸ ಗೊಬ್ಬರವಾಗಿ ಪರಿವರ್ತನೆಯಾಗಲು ಸುಮಾರು ಮೂರು ತಿಂಗಳು ಬೇಕಾಗುತ್ತಿದ್ದು, ತಿಂಗಳಿಗೆ ಸುಮಾರು 700 ಕೆಜಿ ನಷ್ಟು ಗೊಬ್ಬರ ತಯಾರಾಗುತ್ತದೆ ನಂತರ ಅದನ್ನು ಮಾರಾಟ ಮಾಡಲಾಗುತ್ತಿದ್ದು ಮುಂದಿನ ವಾರದಿಂದ ಅದನ್ನು 5 ಮತ್ತು 10 ಕಿ.ಲೋ ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತದೆ ಎಂದರು.
Kshetra Samachara
05/01/2022 06:55 pm