ಮುಲ್ಕಿ: ಮುಲ್ಕಿಯಲ್ಲಿ ಗುರುವಾರ ಸಂಜೆ ಸುರಿದ ಭಾರಿ ಗಾಳಿ- ಮಳೆಗೆ ಸರಕಾರಿ ಆಸ್ಪತ್ರೆ ಬಳಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆ ಬದಿ ಕುಸಿದಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ.
ಕೆಲ ತಿಂಗಳ ಹಿಂದೆ ಮುಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ಎಂ ಆರ್ ಪಿಎಲ್ ಕೋಟಿ ರೂ. ವೆಚ್ಚದ ಅನುದಾನದಲ್ಲಿ ನೂತನ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಅದರಂತೆ ನೂತನ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆದಿತ್ತು.
ಆದರೆ, ಕಾಂಕ್ರೀಟ್ ರಸ್ತೆ ಇಕ್ಕೆಲದಲ್ಲಿ ಸೂಕ್ತ ರಕ್ಷಣೆ ತಡೆಗೋಡೆಗಳು ಇಲ್ಲದ ಕಾರಣ ಭಾರಿ ಮಳೆಗೆ ರಸ್ತೆಯ ಒಂದು ಪಾರ್ಶ್ವ ಕುಸಿದಿದೆ. ಕಾಂಕ್ರೀಟ್ ರಸ್ತೆ ಬದಿ ಹಾಕಿರುವ ಮಣ್ಣು ಮಳೆಗೆ ಕೊಚ್ಚಿ ಹೋಗಿದ್ದು, ಕೂಡಲೇ ರಸ್ತೆಬದಿಗೆ ಸಮರ್ಪಕ ತಡೆಗೋಡೆ ನಿರ್ಮಾಣದ ಅಗತ್ಯವಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುವಾಗ ರಸ್ತೆ ಇಕ್ಕೆಲ ತಡೆಗೋಡೆ ನಿರ್ಮಾಣ ಮಾಡುವಂತೆ ಕೆಲ ದಿನಗಳ ಹಿಂದೆ "ಪಬ್ಲಿಕ್ ನೆಕ್ಸ್ಟ್" ಗುತ್ತಿಗೆದಾರರನ್ನು ಎಚ್ಚರಿಸಿತ್ತು.
ಆದಷ್ಟು ಬೇಗ ತಡೆಗೋಡೆ ಕಾಮಗಾರಿ ನಡೆಸಿ ಕಾಂಕ್ರೀಟ್ ರಸ್ತೆ ನೀರುಪಾಲಾಗದಂತೆ ಗುತ್ತಿಗೆದಾರರು ಎಚ್ಚರಿಕೆ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
05/11/2021 10:00 pm