ಮುಲ್ಕಿ: ಪಡುಪಣಂಬೂರು ಗ್ರಾಮಪಂಚಾಯತ್ ವ್ಯಾಪ್ತಿಯ ತೋಕೂರು ಕಂಬಳಬೆಟ್ಟು ಬಳಿ ಸರಕಾರಿ ಜಾಗದಲ್ಲಿ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಮರವನ್ನು ಕಡಿಯಲಾಗಿದ್ದು, ಸಮೀಪದಲ್ಲಿ ಸರಕಾರಿ ಜಾಗ ಅತಿಕ್ರಮಣ ಮಾಡಿಕೊಂಡು ಅಕ್ರಮ ರಸ್ತೆ ನಿರ್ಮಾಣವಾಗಿದೆ.
ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಬೃಹದಾಕಾರದ ಹುಲುಸಾದ ಮರವನ್ನು ನಾಶಮಾಡಿದ್ದಾರೆ. ಈ ಮರದ ಬುಡದಲ್ಲಿ ಅನಾದಿಕಾಲದಿಂದಲೂ ಭಕ್ತರು ಆರಾಧಿಸಿಕೊಂಡು ಬಂದಿರುವ ನಾಗನ ಕಟ್ಟೆ ಇದ್ದು ನೆಲಸಮ ಮಾಡಲು ಕ್ಷಣಗಣನೆ ಶುರುವಾಗಿದೆ.
ಇದೇ ಪರಿಸರದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅಂಗನವಾಡಿ ಗೆಂದು ಮೀಸಲಿಟ್ಟ ಸರಕಾರಿ ಜಾಗದಲ್ಲಿ ರಾಜಾರೋಷವಾಗಿ ರಸ್ತೆ ನಿರ್ಮಾಣ ಕಾರ್ಯ ನಡೆಸುತ್ತಿದ್ದು ಈ ಬಗ್ಗೆ ಮುಲ್ಕಿ ತಹಶೀಲ್ದಾರ್, ಪಡುಪಣಂಬೂರು ಗ್ರಾಮ ಪಂಚಾಯಿತಿ, ಗ್ರಾಮ ಸಭೆಯಲ್ಲಿ ಪ್ರಶ್ನಿಸಿ ದೂರು ನೀಡಿದರೂ ಸರಿಯಾದ ಉತ್ತರ ದೊರಕುತ್ತಿಲ್ಲ.
ಸರಕಾರಿ ಜಾಗವನ್ನು ಸ್ವಾಧೀನಪಡಿಸಿಕೊಂಡು ಅಕ್ರಮ ರಸ್ತೆ ನಿರ್ಮಾಣದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಆಲ್ವಿನ್ ಪಕ್ಷಿಕೆರೆ ದೂರಿದ್ದಾರೆ. ಹಾಗೂ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.
Kshetra Samachara
28/09/2021 05:16 pm