ಕಾಪು: ದಂಡತೀರ್ಥ ಕೆರೆ ಪಾರ್ಶ್ವ ಕುಸಿತ; ಕಳಪೆ ಕಾಮಗಾರಿ ಶಂಕೆ

ಕಾಪು ಪುರಸಭೆಯ ವಿಶೇಷ ಅನುದಾನದೊಂದಿಗೆ ಪುನರುಜ್ಜೀವನಗೊಳಿಸಿದ್ದ ಉಳಿಯಾರಗೋಳಿ ದಂಡತೀರ್ಥ ಕೆರೆಯ ಎಡ ಪಾರ್ಶ್ವ ಭಾಗಶಃ ಕುಸಿದು ಬಿದ್ದಿದ್ದು ಕೆರೆಗೆ ಹಾನಿಯುಂಟಾಗಿದೆ.

ಇದರಿಂದಾಗಿ ಕೆರೆ ಮಳೆಗಾಲದಲ್ಲಿ ಸಂಪೂರ್ಣ ಕುಸಿತಕ್ಕೊಳಗಾಗುವ ಭೀತಿ ಎದುರಾಗಿದೆ. ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯುವ ಪರ್ಯಾಯ ಪೀಠಾರೋಹಣಗೈಯ್ಯುವ ಯತಿಗಳು ದಂಡತೀರ್ಥ ಕೆರೆಯಲ್ಲಿ ಸ್ನಾನಾದಿ ಕಾರ್ಯ ಪೂರೈಸಿ, ಇಲ್ಲಿನ ಕುಂಜಿ ಗೋಪಾಲಕೃಷ್ಣ ದೇವರಿಗೆ ಪೂಜೆ ನೆರವೇರಿಸಿ, ಬಳಿಕ ಪರ್ಯಾಯ ಪೀಠಾರೋಹಣಗೈಯ್ಯುವುದು ಸಂಪ್ರದಾಯ. ಈ ಕೆರೆಯಲ್ಲಿ ವರ್ಷಪೂರ್ತಿ ನೀರಿನ ಒರತೆ ಇರುವುದು ಇಲ್ಲಿನ ವಿಶಿಷ್ಟತೆ.

ಮೂರು ವರ್ಷಗಳ ಹಿಂದೆಯಷ್ಟೇ ಕಾಪು ಪುರಸಭೆಯ ವತಿಯಿಂದ 17 ಲಕ್ಷ ರೂ. ವೆಚ್ಚದಲ್ಲಿ ದಂಡತೀರ್ಥ ಕೆರೆ ಅಭಿವೃದ್ಧಿಗೊಳಿಸಿ, ಜನರ ಉಪಯೋಗಕ್ಕಾಗಿ ಒದಗಿಸಲಾಗಿತ್ತು.

ಕಾಪು ದಂಡತೀರ್ಥ ಕೆರೆ ಕುಸಿತಕ್ಕೊಳಗಾಗಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಪುರಸಭೆ ಅಧ್ಯಕ್ಷರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಂಡತೀರ್ಥ ಕೆರೆಯ ದುರಸ್ತಿಗೆ 2018ರಲ್ಲಿ ಪುರಸಭೆಯ ವಿಶೇಷ ಅನುದಾನದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಬಗ್ಗೆ ಕಡತ ಪರಿಶೀಲಿಸಿ, ಬಳಿಕ ದುರಸ್ತಿಗೆ ಕ್ರಮ ತೆಗೆದುಕೊಳ್ಳಲಾಗುವುದು. ತಾಂತ್ರಿಕ ಪರಿಶೀಲನೆ ನಡೆಸಿ, ಶೀಘ್ರ ಸರಿಪಡಿಸಲಾಗುವುದು ಎಂದು ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವಡ ತಿಳಿಸಿದ್ದಾರೆ.

ಕಾಮಗಾರಿ ಪೂರ್ಣಗೊಂಡು ಮೂರೇ ವರ್ಷದಲ್ಲಿ ಕುಸಿದು ಬಿದ್ದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಳೆಗಾಲಕ್ಕೆ ಮೊದಲು ಕೆರೆ ದುರಸ್ತಿ ಗೊಳಿಸಲು ಮನಸ್ಸು ಮಾಡಬೇಕಿದೆ. ಇಲ್ಲವಾದಲ್ಲಿ ಭಾರಿ ಪ್ರಮಾಣದ ಕುಸಿತ ಉಂಟಾಗಿ ಕೆರೆಗೆ ಸಂಪೂರ್ಣ ಹಾನಿ ಉಂಟಾಗುವ ಸಾಧ್ಯತೆ ಇದೆ.

Kshetra Samachara

Kshetra Samachara

24 days ago

Cinque Terre

12.04 K

Cinque Terre

2

  • yogeesha
    yogeesha

    ಡಯಾನ ಟಾಕೀಸ್ ಕೋಲಾ

  • B.R.NAYAK
    B.R.NAYAK

    ಹಿಂದಿನ ಪುರಸಭೆಯ,ಅಧ್ಯಕ್ಷರು ಹಾಗೂ ಪುರಸಭೆಯ ರಾಯಪ್ಪ ರವರನ್ನು ಗೌಜು ,ಗದ್ದಲ,ವಾದ್ಯ ,ಡೋಲು ಬಾರಿಸುವ ಮೂಲಕ ಒಂದು "" ಅಗೌರವ ಸನ್ಮಾನ ಕಾರ್ಯ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.""