ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟೇಶ್ವರ: ದೇಗುಲದಿಂದ ಸಾರ್ವಜನಿಕರ ಸಹಕಾರದಿಂದ ಕೋಟಿತೀರ್ಥ ಪುಷ್ಕರಣಿ ಅಭಿವೃದ್ಧಿ

ಕೋಟೇಶ್ವರ: ಕಳೆದ 8 ವರ್ಷಗಳ ಹಿಂದೆ ರಾಜ್ಯದಲ್ಲೇ ಅತೀ ದೊಡ್ಡ ಪುಷ್ಕರಣಿ ಎಂದು ಹೆಸರುವಾಸಿಯಾಗಿರುವ ಕೋಟಿತೀರ್ಥ ಕೆರೆಯಲ್ಲಿ ಜಲಕ್ಷಾಮ ಸಮಸ್ಯೆ ಉದ್ಭವವಾಗಿತ್ತು. ಆದರೆ ಇಲ್ಲಿನ ದೇಗುಲದ ವತಿಯಿಂದ ಹಾಗೂ ಸಾರ್ವಜನಿಕರ ಸಹಕಾರದಿಂದ ಕೆರೆ ಅಭಿವೃದ್ಧಿಗೊಂಡು ಕಾಲ ಕ್ರಮೇಣ ಹೂಳೆತ್ತುವ ಕೆಲಸ ಯಶಸ್ವಿಯಾಗುವ ಮೂಲಕ ಇದೀಗ ಜಲಕ್ಷಾಮ ಸಮಸ್ಯೆ ನಿವಾರಣೆಯಾಗಿದೆ.

50 ಲಕ್ಷ ರೂ. ವೆಚ್ಚದಲ್ಲಿ ಪುಷ್ಕರಣಿ ಪುನರ್ ನಿರ್ಮಾಣವಾಗಿದ್ದು, ಸುಮಾರು ನಾಲ್ಕುವರೆ ಎಕರೆ ವಿಸ್ತೀರ್ಣಹೊಂದಿರುವ ಈ ಕೆರೆಯಿಂದ 2-3 ಕಿಮೀ ವ್ಯಾಪ್ತಿಯ ಕೃಷಿಕರಿಗೆ ನೀರಿನ ಸೌಲಭ್ಯ ಸಿಕ್ಕಂತಾಗಿದೆ. ಒಟ್ಟಾರೆ ದೇಗುಲದ ಸಂಕಲ್ಪ ಹಾಗೂ ಸಾರ್ವಜನಿಕರ ಸಹಕಾರದಿಂದ ಕೋಟೇಶ್ವರ ಪುಷ್ಕರಣಿಯಿಂದ ಸ್ಥಳೀಯ ರೈತಾಪಿ ವರ್ಗಕ್ಕೆ ಹಾಗೂ ಜನರಿಗೆ ನೀರಿನ ಸಮಸ್ಯೆ ಬಗೆಹರಿಸಿದಂತಾಗಿದೆ.

Edited By : Manjunath H D
PublicNext

PublicNext

20/04/2022 06:41 pm

Cinque Terre

65.36 K

Cinque Terre

1

ಸಂಬಂಧಿತ ಸುದ್ದಿ