ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಶಾಂತಗೊಂಡ ಕಡಲು: ಸಮುದ್ರಕ್ಕಿಳಿದ ಮೀನುಗಾರರು

ಮಲ್ಪೆ: ಕಳೆದ ಕೆಲವು ದಿನಗಳಿಂದ ಸುರಿದ ಗಾಳಿ ಮಳೆಯಿಂದಾಗಿ ಸಮುದ್ರ ಪ್ರಕ್ಷುಬ್ಧಗೊಂಡಿತ್ತು. ಇದರ ಪರಿಣಾಮವಾಗಿ ಒಂದು ವಾರ ಆಳಸಮುದ್ರ ಮೀನುಗಾರರು ಬೋಟುಗಳನ್ನು ದಡಕ್ಕೆ ತಂದು ಲಂಗರು ಹಾಕಿ ಮೀನುಗಾರಿಕೆ ಸ್ಥಗಿತಗೊಳಿಸಿದ್ದರು. ಇದೀಗ ವಾರದಿಂದ ಸ್ಥಗಿತಗೊಂಡಿದ್ದ ಮೀನುಗಾರಿಕೆ ಮತ್ತೆ ಆರಂಭಗೊಂಡಿದೆ.

ಬುಧವಾರ ಮಲ್ಪೆ ಬಂದರಿನಿಂದ ಸುಮಾರು ಶೇ. 40ರಷ್ಟು ಆಳಸಮುದ್ರ ಬೋಟುಗಳು ಕಡಲಿಗಿಳಿದಿವೆ. ಬಹುತೇಕ ಪರ್ಸೀನ್ ಬೋಟುಗಳು ಬೆಳಿಗ್ಗೆಯೇ ಮೀನುಗಾರಿಕೆಗೆ ತೆರಳಿವೆ. ಇನ್ನು ಕೆಲವು ಬೋಟುಗಳು ಕಡಲಿಗಿಳಿಯಲು ಸಿದ್ಧತೆ ನಡೆಸುತ್ತಿವೆ. ಮೀನುಗಾರಿಕೆ ಋತು ಆರಂಭಗೊಂಡ ಒಂದು ತಿಂಗಳು ಕಳೆದು ಕೊಂಚ ಆದಾಯ ಗಳಿಸುವಷ್ಟರಲ್ಲೇ ಪ್ರತಿಕೂಲ ಹವಾಮಾನ ಸಂಭವಿಸಿದ್ದು ಮೀನು ಗಾರಿಕೆ ನಡೆಸದಂತಾಗಿತ್ತು. 8 ದಿನಗಳಲ್ಲಿ ನಿತ್ಯ ಕೋಟ್ಯಂತರ

ರೂಪಾಯಿ ವ್ಯವಹಾರಕ್ಕೆ ಹೊಡೆತ ಉಂಟಾಗಿತ್ತು. ಇದೀಗ ಮೀನುಗಾರಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಿದ್ದು, ಮೀನುಗಾರರು ಕಡಲಿಗಿಳಿಯಲು ಸಜ್ಜಾಗಿದ್ದಾರೆ. ಇಂದು ಪೂರ್ಣಪ್ರಮಾಣದಲ್ಲಿ ಬೋಟ್‌ಗಳು ತೆರಳುತ್ತಿರುವುದಾಗಿ ಮೀನುಗಾರರು ಮಾಹಿತಿ ನೀಡಿದ್ದಾರೆ.

Edited By : Somashekar
Kshetra Samachara

Kshetra Samachara

15/09/2022 04:57 pm

Cinque Terre

13.5 K

Cinque Terre

0

ಸಂಬಂಧಿತ ಸುದ್ದಿ