ಬಾರಕೂರು: ಬಾರಕೂರಿನ ನೀಲಾವರ ಬಳಿಯ ಕಿಂಡಿ ಅಣೆಕಟ್ಟು ಭಾರೀ ಮಳೆಗೆ ಮುಳುಗಿ ಹೋಗಿದೆ. ಕಿಂಡಿಯಲ್ಲಿ ಮರಮಟ್ಟು ಸಿಲುಕಿಕೊಂಡು ಕೃತಕ ನೆರೆ ಜೊತೆಗೆ ಸಂಪರ್ಕ ಕಡಿತಗೊಂಡಿದೆ. ನಿರಂತರ ಮಳೆಗೆ ಅಣೆಕಟ್ಟಿನ ಮೇಲೆ ನೀರು ಹರಿದಿದೆ.
ಇಂದು ನೀರಿನ ಮಟ್ಟ ಕೊಂಚ ಇಳಿಮುಖಗೊಂಡಿದ್ದರೂ ಧರೆಗುರುಳಿದ ಬೃಹತ್ ಮರಗಳು ಸಿಲುಕಿಕೊಂಡಿದ್ದರಿಂದ ಬಂಡೀಮಠ ಹನೆಹಳ್ಳಿ ಭಾಗದ ಜನರು ನೀಲಾವರ ಮಟಪಾಡಿಗೆ ಹೋಗಲು ಪರದಾಡುವಂತಾಯಿತು.
ಬಹೂಪಯೋಗಿ ಈ ಕಿಂಡಿ ಅಣೆಕಟ್ಟೆಗೆ ಮರದ ಹಲಗೆ ಜೋಡಿಸಿ ಅಣೆಕಟ್ಟನ್ನು ಅಗಲೀಕರಣ ಮಾಡಬೇಕು ಎಂದು ಸ್ಥಳೀಯ ರೈತರ ಬೇಡಿಕೆಯಾಗಿತ್ತು. ಆದರೆ, ಸಣ್ಣ ನೀರಾವರಿ ಇಲಾಖೆ ಅಣೆಕಟ್ಟು ನಿರ್ಮಿಸಿದ ಮೇಲೆ ಇತ್ತ ಕಡೆ ತಲೆಯೇ ಹಾಕಿಲ್ಲ!
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ವಾಹನ ಸಂಚಾರ ಇರುವ ಭಾಗಕ್ಕೆ ಮಾತ್ರ ಭೇಟಿ ನೀಡಿ, ಸಮುದ್ರ ಕೊರೆತ ಮತ್ತಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಆದರೆ, ಕುಗ್ರಾಮದ ಇಂತಹ ಸಮಸ್ಯೆಗಳಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ
PublicNext
14/07/2022 08:23 pm