ಸುಳ್ಯ: ನಿನ್ನೆ ರಾತ್ರಿ ಸುರಿದ ಮಳೆಗೆ ಕಲ್ಲುಗುಂಡಿ ನಿವಾಸಿ ಶಿವಪ್ಪ ಬೊಳುಗಲ್ಲು ಎಂಬವರ ಮನೆಗೆ ಹಾನಿಯಾಗಿದೆ. ಮನೆಯ ಹಿಂಭಾಗದ ಅಡುಗೆ ಕೋಣೆಯ ಗೋಡೆ ಕುಸಿದು ಮನೆ ಮಾಡು ಬಿದ್ದಿದೆ.
ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ ಸದಸ್ಯರಾದ ಜಗದೀಶ್ ರೈ, ಎಸ್.ಕೆ ಹನೀಫ್, ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಾಗೇಶ್ ಪಿ.ಆರ್ ಗ್ರಾಮ ಸಹಾಯಕ ಸೋಮನಾಥ್, ಉಮೇಶ್, ಅಂಗನವಾಡಿ ಕಾರ್ಯಕರ್ತೆ ಧರ್ಮಕಲಾ ಕೆ. ಎನ್. ಪಂಚಾಯತ್ ಸಿಬ್ಬಂದಿ ಭರತ್, ಪ್ರೀತಮ್, ಆರೋಗ್ಯ ಇಲಾಖೆಯ ಸಮುದಾಯ ಆರೋಗ್ಯ ಅಧಿಕಾರಿ ಚಿತ್ರ. ಐ, ಆಶಾ ಕಾರ್ಯಕರ್ತೆ ಪ್ರೇಮಲತ ಮತ್ತು ಕುಸುಮಧರ ಉಪಸ್ಥಿತರಿದ್ದರು. ಗೃಹ ರಕ್ಷಕ ದಳದ ಗಿರೀಶ್, ವಿನೋದ್, ಸಚಿನ್, ಲಿಖಿತ್ ಮತ್ತಿತರರು ಕಾರ್ಯಾಚರಣೆ ನಡೆಸಿ ಕುಸಿದ ಗೋಡೆ ಮತ್ತು ಮಾಡು ತೆರವು ಕಾರ್ಯದಲ್ಲಿ ಸಹಕರಿಸಿದರು.
Kshetra Samachara
09/07/2022 09:57 pm