ಕಡಬ: ಸರಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕಡಬ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಒಂದೆಡೆ ಮಳೆ, ಇನ್ನೊಂದೆಡೆ ಕಚೇರಿಯ ಎದುರು ಪುರುಷರು, ಮಹಿಳೆಯರು ಅರ್ಜಿ ಹಿಡಿದುಕೊಂಡು ನಿಂತು ಪರದಾಡುವಂತಾಯಿತು.
ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಅವರ ಕಚೇರಿಯ ಒಳಗಡೆ ಜನರ ಸಮಸ್ಯೆ ಆಲಿಸಿ ಪರಿಹಾರ ನೀಡುತ್ತಿದ್ದು, ಇಂತಹ ಉತ್ತಮ ಕಾರ್ಯಕ್ರಮ ಆದರೂ ಇದನ್ನು ಒಂದು ಸಭಾಭವನ ಅಥವಾ ವಿಶಾಲ ಕೊಠಡಿಯಲ್ಲಿ ಮಾಡಿದ್ದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತಿತ್ತು ಎಂದು ಸಾರ್ವಜನಿಕರ ಅಸಮಾಧಾನ ಹೊರ ಹಾಕಿದ್ದಾರೆ. ಇನ್ನಾದರೂ ತಾಲೂಕು ಆಡಳಿತ ಎಚ್ಚೆತ್ತೊಳ್ಳಲಿ ಎಂಬುದು ಸಾರ್ವಜನಿಕರ ಅಭಿಪ್ರಾಯ.
Kshetra Samachara
06/07/2022 09:40 am