ಕಡಲ್ಕೊರೆತ ತುರ್ತು ತಡೆ ಕಾಮಗಾರಿಗೆ NDRF ಸ್ಕೀಮ್ ನಿಂದ ಹಣ ಬಿಡುಗಡೆ ಮಾಡಲು ಅವಕಾಶವಿದ್ದರೂ NDRF ನಿಧಿಯನ್ನ ಖರ್ಚು ಮಾಡದೆ ಸರಕಾರ ಸುಮ್ಮನೆ ಕುಳಿತಿದೆ ಎಂದು ಕೇಂದ್ರದ ಮಾಜಿ ಸಚಿವ, ಎಂ.ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.
ಇಂದು ಬೆಳಿಗ್ಗೆ ಸೋಮೇಶ್ವರ ,ಉಚ್ಚಿಲ ಬಟ್ಟಪ್ಪಾಡಿ ಕಡಲ್ಕೊರೆತ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆಗಳನ್ನ ಆಲಿಸಿ ಅವರು ಮಾತನಾಡಿದರು.
ಕಡಲ್ಕೊರೆತ ಸಮಸ್ಯೆ ಹೊಸದೇನು ಅಲ್ಲ.ನಮ್ಮ ಸರಕಾರ ಆಡಳಿತದಲ್ಲಿದ್ದಾಗ ಅಳಿವೆಬಾಗಿಲು ಸೇರಿದಂತೆ ಅನೇಕ ಕಡಲ್ಕೊರೆತ ಪೀಡಿತ ಪ್ರದೇಶಗಳಲ್ಲಿ ಕಾಮಗಾರಿ ನಡೆಸಿದ್ದೇವೆ.ಯಾವುದೇ ಶಾಶ್ವತ ಕಾಮಗಾರಿ ನಡೆಸಿದರೂ ಪ್ರತಿ ವರುಷನೂ ನಿರ್ವಹಣಾ ಕಾಮಗಾರಿ ಅಗತ್ಯ.ಆದರೆ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರವು ಅಸಡ್ಡೆ ತೋರಿ ಕಳೆದ ಮೂರು ವರ್ಷಗಳಿಂದಲೂ ಕಡಲ್ಕೊರೆತ ಪೀಡಿತ ಉಚ್ಚಿಲ,ಬಟ್ಟಪ್ಪಾಡಿ ಪ್ರದೇಶಗಳನ್ನ ಕಡೆಗಣಿಸುತ್ತಾ ಬಂದಿದೆ.
ಬಜೆಟಲ್ಲಿ ಕನಿಷ್ಠ ನಿರ್ವಹಣೆಗೂ ಹಣ ಕೊಡದಿದ್ದರೆ ಕಡಲು ಪ್ರಕ್ಷುಬ್ದಗೊಂಡು ತೀರ ಪ್ರದೇಶವನ್ನ ನುಂಗುವುದು ಖಂಡಿತ .ಈಗಾಗಲೇ ಸ್ಥಳೀಯ ಬೋವಿ ಜನಾಂಗದವರು ಪ್ರದೇಶದಲ್ಲಿ ತಮ್ಮ ಅಸ್ಥಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆಂದರು. ತಾನು ಮತ್ತು ಶಾಸಕ ಖಾದರ್ ಅವರು ತಕ್ಷಣವೇ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಕಡಲ್ಕೊರೆತ ತಡೆಗೆ ತುರ್ತು,ಮಾಧ್ಯಮಿಕ,ಶಾಶ್ವತ ಕಾಮಗಾರಿ ನಡೆಸುವ ಬಗ್ಗೆ ಮಾತುಕತೆ ನಡೆಸಲಿದ್ದೇವೆ ಎಂದರು.
ಸ್ಥಳೀಯ ಶಾಸಕ ಯು.ಟಿ ಖಾದರ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಜೊತೆಯಲ್ಲಿದ್ದರು.
Kshetra Samachara
23/07/2022 12:17 pm