ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಹಳೆಯಂಗಡಿ ಹೆದ್ದಾರಿ ಬದಿ ತ್ಯಾಜ್ಯಕ್ಕೆ ಬೆಂಕಿ; ಪರಿಸರ ಹಾನಿ, ಅಧಿಕಾರಿಗಳು ಮೌನ

ಮುಲ್ಕಿ: ಹಳೆಯಂಗಡಿ ಗ್ರಾಪಂ ವ್ಯಾಪ್ತಿಯ ರಾ.ಹೆ. ಬದಿ ಪಂ. ಸಿಬ್ಬಂದಿ ಲೋಡುಗಟ್ಟಲೆ ತ್ಯಾಜ್ಯ ತಂದು ಸುರಿಯುತ್ತಿದ್ದು, ಅದಕ್ಕೆ ಬೆಂಕಿ ಕೊಟ್ಟು ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಹಳೆಯಂಗಡಿಯಲ್ಲಿ ತ್ಯಾಜ್ಯ ಘಟಕ ಪ್ರಾರಂಭಗೊಂಡು 2 ತಿಂಗಳು ಸಮೀಪಿಸಿದರೂ, ಪ್ರಯೋಜನ ಗ್ರಾಪಂ ಪಡೆಯುತ್ತಿಲ್ಲ. ಸರಕಾರ 18 ಲಕ್ಷ ಖರ್ಚು ಮಾಡಿ ಘಟಕ ನಿರ್ಮಾಣ ಮಾಡಿದ್ದರೂ ಜನರ ತೆರಿಗೆ ಹಣ ಪೋಲಾಗುತ್ತಿದೆ. ತಿಂಗಳ ಹಿಂದೆ ಪಂ. ಆಡಳಿತ ಇರುವಾಗ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುತ್ತಿದ್ದರು.

ಆದರೆ ಪಂಚಾಯತ್ ಬರ್ಖಾಸ್ತುಗೊಂಡ ಕೂಡಲೇ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನೂ ಕೂಡ ಬರ್ಖಾಸ್ತು ಮಾಡಿ ತ್ಯಾಜ್ಯ ಘಟಕದ ವಿಷಯ ಬಗ್ಗೆ ತುಂಬಾ ಪ್ರಚಾರ ಮಾಡಿದರು. ಆದರೆ, ಘಟಕವಾಗಿ ಎರಡು ತಿಂಗಳು ಸಮೀಪಿಸಿದ್ದರೂ ಘಟಕ ಕಾರ್ಯನಿರ್ವಹಿಸುತ್ತಿಲ್ಲ ಎಂದು ನಾಗರಿಕರು ತಿಳಿಸಿದ್ದಾರೆ. ರಾ. ಹೆ. ಹಳೆಯಂಗಡಿ ಹೃದಯಭಾಗದಲ್ಲಿಯೇ ಪಂ. ಪೌರಕಾರ್ಮಿಕರು ಗಾಡಿಯಲ್ಲಿ ರಾಶಿಗಟ್ಟಲೆ ಕಸ, ಪ್ಲಾಸ್ಟಿಕ್ ತ್ಯಾಜ್ಯ ರಾಶಿ ತಂದು ಬೆಂಕಿಕೊಟ್ಟು ಪರಿಸರ ಹಾಳು ಮಾಡಿದರೂ ಸಂಬಂಧಪಟ್ಟ ಅಧಿಕಾರಿಗಳು ಮೌನವಾಗಿದ್ದಾರೆ ಎಂದವರು ಆರೋಪಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

19/11/2020 08:57 pm

Cinque Terre

33.07 K

Cinque Terre

0

ಸಂಬಂಧಿತ ಸುದ್ದಿ