ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಏರಿದ ನೆರೆ, ಅಗ್ನಿಶಾಮಕ ದಳದಿಂದ ಹಲವರ ಸ್ಥಳಾಂತರ, ರಕ್ಷಣೆ

ಕುಂದಾಪುರ: ಸತತ ಮಳೆಗೆ ಈಡಾಗಿ ಕೃತಕ ನೆರೆ ಬಂದಿರುವ ಕುಂದಾಪುರದ ನಾವುಂದ ಗ್ರಾಮದ ಬಡಾಕೆರೆ, ಸಾಲ್ಬುಡ, ಬಾಂಗಿನಮನೆ, ಕಂಡಿಕೇರಿ ಮೊದಲಾದೆಡೆ ನೂರಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗಿನಿಂದಲೇ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದೆ. ಈ ಗ್ರಾಮಗಳಲ್ಲಿ ಜಲದಿಗ್ಭಂಧನಕ್ಕೊಳಗಾದ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಕಾರ್ಯ ನಡೆಯುತ್ತಿದೆ.

ಈ‌ ಭಾಗದ ಮನೆ, ದೇವಸ್ಥಾನ, ಜಾನುವಾರು ಕೊಟ್ಟಿಗೆ, ರಸ್ತೆ ಎಲ್ಲವೂ ನೀರಿನಿಂದ ಮುಳುಗಿ ಹೋಗಿದೆ. ನೆರೆಯಿಂದಾಗಿ ಹೊಳೆ, ಗದ್ದೆ, ತೋಟ ಯಾವುದು ಎಂಬುದೇ ತಿಳಿಯಲಾಗದಂತಾಗಿದೆ. ನಾಳೆಯೂ ರೆಡ್ ಅಲರ್ಟ್ ಇರುವುದರಿಂದ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಮಳೆಯಾಗುತ್ತಿದ್ದರೂ ಬೈಂದೂರು, ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕುಗಳಲ್ಲಿ ನೆರೆಯ ತೀವ್ರತೆ ಹೆಚ್ಚಿದೆ. ಈ ತಾಲೂಕುಗಳಲ್ಲಿ ಹರಿಯುವ ನದಿಗಳು ಉಕ್ಕಿ ಹರಿಯುತ್ತಿವೆ. ಮುಖ್ಯವಾಗಿ ಕುದ್ರುವಾಸಿಗಳ ಬದುಕು ನರಕವಾಗಿದೆ. ಪ್ರತಿಯೊಂದಕ್ಕೂ ದೋಣಿಯನ್ನೇ ಆಶ್ರಯಿಸುವ ಜನ‌ ದಿಕ್ಕೇ ತೋಚದಂತಾಗಿದ್ದಾರೆ.

Edited By :
Kshetra Samachara

Kshetra Samachara

08/07/2022 04:05 pm

Cinque Terre

19 K

Cinque Terre

0