ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಧಿಕಾರಿಗಳ ನಿರ್ಲಕ್ಷ್ಯ : ಧರೆಗುರುಳಿದ ಕಿನ್ಯ ಗ್ರಾಮದ ಬೆಳರಿಂಗೆ ಸರಕಾರಿ ಶಾಲೆ

ಉಳ್ಳಾಲ: ಸೋಮವಾರ ಶಾಲಾರಂಭವಾಗಿದೆ. ಅಂದೇ ಸುರಿದ ಮಳೆಗೆ ಕಿನ್ಯ ಗ್ರಾಮದ ಬೆಳರಿಂಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಗೊಂಡಿದ್ದ ಕಟ್ಟಡವು ಧರೆಗುರುಳಿದ್ದು ಘಟನೆಯು ರಾತ್ರಿ ನಡೆದ ಪರಿಣಾಮ ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.

ಕಿನ್ಯ ಗ್ರಾಮದ ಬೆಳರಿಂಗೆ ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಎಂಟನೇ ತರಗತಿಯವರೆ ಶಾಲೆ ಇದೆ. ಇಲ್ಲಿ ಸುಮಾರು 127 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ಧಾರೆ. ಆದರೆ ಈ ಶಾಲಾ ಕಟ್ಟಡವು ಶಿಥಿಲಾವಸ್ಥೆಯಲ್ಲಿದೆ ಎಂದು ಕಳೆದ ವರ್ಷವೇ ಶಿಕ್ಷಣ ಇಲಾಖಾಧಿಕಾರಿಗಳಿಗೆ ಶಾಲಾಭಿವೃದ್ಧಿ ಸಮಿತಿಯವರು ದೂರು ನೀಡಿದ್ದಾರೆ.

ಕಾಟಾಚಾರಕ್ಕೆ ಸ್ಥಳ ಪರಿಶೀಲನೆಗೆ ಬಂದಿದ್ದ ಜಿಲ್ಲಾ ಪಂಚಾಯತ್ ಇಂಜಿನಿಯರ್ ನಿತಿನ್ ಎಂಬವರು ಕಟ್ಟಡ ಗಟ್ಟಿ ಮುಟ್ಟಾಗಿದೆ ಎಂದು ಸರ್ಟಿಫಿಕೇಟ್ ನೀಡಿ ಬಂದ ದಾರಿಯಲ್ಲೇ ಹಿಂತಿರುಗುತ್ತಿದ್ದರಂತೆ.

ಅಧಿಕಾರಿಗಳ ನಿರ್ಲಕ್ಷದ ಪರಿಣಾಮ ನಿನ್ನೆ ಸುರಿದ ಮಳೆಗೆ ಶಿಥಿಲಗೊಂಡಿದ್ದ ಶಾಲಾ ಕಟ್ಟಡದ ಹಂಚಿನ ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿದೆ.

ಶಾಲಾರಂಭದ ರಾತ್ರಿಯೇ ಶಾಲಾ ಕಟ್ಟಡ ಧರೆಗುರುಳಿದೆ. ಕಟ್ಟಡವು ಶಿಥಿಲಾವಸ್ಥೆಯಲ್ಲಿರುವುದನ್ನ ಗಮನಿಸಿದ್ದ ಶಾಲಾಭಿವೃದ್ಧಿ ಸಮಿತಿಯವರು ಆ ಕೊಠಡಿಯಲ್ಲಿ ನಿನ್ನೆ ವಿದ್ಯಾರ್ಥಿಗಳಿಗೆ ತರಗತಿ ನೀಡದೆ ,ಪಕ್ಕದ ಮದರಸದ ಕಟ್ಟಡದಲ್ಲಿ ತರಗತಿ ನೀಡಿ ಮುಂಜಾಗರೂಕತೆ ವಹಿಸಿದ್ದಾರೆ.

ಘಟನಾ ಸ್ಥಳಕ್ಕೆ ಕಿನ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇನ್ನಾದರೂ ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಿ ಕೊಡುವಂತೆ ಶಾಲಾಭಿವೃದ್ಧಿ ಸಮಿತಿಯವರು ಅಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ.

Edited By : Somashekar
Kshetra Samachara

Kshetra Samachara

17/05/2022 06:39 pm

Cinque Terre

9.12 K

Cinque Terre

0

ಸಂಬಂಧಿತ ಸುದ್ದಿ