ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಒಂದಲ್ಲಾ ಒಂದು ಅವಾಂತರವನ್ನು ಸೃಷ್ಟಿಸಿದೆ. ಬಂಟ್ವಾಳದಲ್ಲಿ ಮನೆ ಮೇಲೆ ಗುಡ್ಡ ಕುಸಿದು ಬಿದ್ದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಒಬ್ಬನಿಗೆ ಗಂಭೀರ ಗಾಯವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದೀಗ ಮಂಗಳೂರು ವಿಮಾನ ನಿಲ್ದಾಣ ರನ್ ವೇ ಬದಿಯಲ್ಲೇ ರಸ್ತೆ ಕುಸಿದಿದೆ. ಅದ್ಯಪಾಡಿ ಬಳಿಯಿರುವ ರನ್ ವೇ ಪಕ್ಕದಲ್ಲೇ ಕುಸಿತ ಕಂಡಿದೆ. ಅದ್ಯಪಾಡಿಯಿಂದ ಕೈಕಂಬ ಹೋಗುವ ರಸ್ತೆ ಬಂದ್ ಅಗಿದ್ದು ಸ್ಥಳೀಯ ನಿವಾಸಿಗಳ ಸಂಪರ್ಕ ಬಂದ್ ಆಗಿದೆ.
Kshetra Samachara
07/07/2022 11:09 am