ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅಂಬೇಡ್ಕರ್ ವೃತ್ತದಿಂದ ಲೈಟ್ ಹೌಸ್ ಮಾರ್ಗದ ಕೆಥೋಲಿಕ್ ಕ್ಲಬ್ ವರೆಗಿನ ರಸ್ತೆಗೆ ಮೂಲ್ಕಿ ಸುಂದರ ರಾಮ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡಲಾಯಿತು.
ಮಂಗಳೂರು ಮಹಾನಗರ ಪಾಲಿಕೆಯ ಪ್ರಸ್ತಾವನೆಯಂತೆ ರಾಜ್ಯ ಸರ್ಕಾರವು 2017 ಮೇ ತಿಂಗಳಲ್ಲಿ ಈ ರಸ್ತೆಗೆ "ಮೂಲ್ಕಿ ಸುಂದರ ರಾಮ ಶೆಟ್ಟಿ ರಸ್ತೆ" ಎಂದು ನಾಮಕರಣ ಮಾಡಲು ಅನುಮೋದನೆ ನೀಡಿತ್ತು. ಆದರೆ, ಈ ಬಗ್ಗೆ ಆಕ್ಷೇಪಗಳು ಬಂದಿದ್ದರಿಂದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.
2017 ರ ಜುಲೈ ನಲ್ಲಿ ಕೋರ್ಟ್, ಸರಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿತ್ತು. ಬಳಿಕ
2019 ರ ಏಪ್ರಿಲ್ 11 ರಂದು ಈ ಪ್ರಸ್ತಾವನೆಯನ್ನು ಪುನರ್ ಪರಿಶೀಲನೆ ನಡೆಸುವಂತೆ ಸರಕಾರಕ್ಕೆ ಆದೇಶಿಸಿತ್ತು.
ಹೀಗಾಗಿ ಕೋರ್ಟ್ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲು ಸರಕಾರವು ಪಾಲಿಕೆಗೆ ಸೂಚಿಸಿತ್ತು. ತದನಂತರ
ಈ ಪ್ರಸ್ತಾವನೆ ಅನುಮೋದಿಸಿ ಇದೀಗ ಹೆಸರಿಡಲು ಆದೇಶ ನೀಡಿತ್ತು. ಈ ಬಗ್ಗೆ ನಿನ್ನೆ ನಡೆದ ನಗರಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮೇಯರ್ ದಿವಾಕರ್ ಪಾಂಡೇಶ್ವರ ಅವರು ನಾಮಕರಣ ವಿಚಾರ ಘೋಷಿದ್ದರು. ಅದರಂತೆ ಇಂದು ಈ ರಸ್ತೆಗೆ ನಾಮಕರಣ ಮಾಡಲಾಯಿತು. ವಾದ್ಯ ಘೋಷಗಳೊಂದಿಗೆ ಕಾರ್ಯಕ್ರಮ ನಡೆಯಿತು.
Kshetra Samachara
23/09/2020 11:56 am