ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಮಕ್ಕಳನ್ನು ಪಡೆಯಲು ತರಬೇತಿ ಬೇಡ: ಮಕ್ಕಳನ್ನು ಬೆಳೆಸಲು ತರಬೇತಿ ಬೇಕು: ಪಿಎಸ್ಐ ಮುಕ್ತಾಬಾಯಿ

ಬ್ರಹ್ಮಾವರ: ಇಲ್ಲಿನ ರುಡ್ ಸೆಟ್ ಸಂಸ್ಥೆಯಲ್ಲಿ ಮಹಿಳಾ ಟೈಲರಿಂಗ್ ತರಬೇತಿ ಸಮಾರೋಪ ಸಮಾರಂಭ ಮತ್ತು ಮಹಿಳಾ ಸದಸ್ಯರ ಪ್ರಮಾಣ ಪತ್ರ ವಿತರಣಾ ಸಮಾರಂಭ ಶುಕ್ರವಾರ ಜರುಗಿತು.

ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಬ್ರಹ್ಮಾವರ ಪೊಲೀಸ್ ಠಾಣೆಯ ಮಹಿಳಾ ಪಿ ಎಸ್ ಐ ಮುಕ್ತಾಬಾಯಿ ಫೋಕ್ಸೊ ಕಾನೂನಿನ ಕುರಿತು ಮಾತನಾಡಿದ್ರು. ಮಕ್ಕಳನ್ನು 18 ವರ್ಷದ ತನಕ ಪೋಷಕರು ಎಲ್ಲಾ ವಿಷಯದಲ್ಲಿ ಗಮನ ನೀಡಬೇಕಾಗಿದೆ. ಮಕ್ಕಳ ಅನುಮತಿ ಇಲ್ಲದೇ ದೇಹದ ಯಾವುದೇ ಭಾಗವನ್ನು ಮುಟ್ಟುವುದು ಕೂಡಾ ಪೋಕ್ಸೋ ಕಾನೂನಿನಲ್ಲಿ ಅಪರಾಧ. ಪೋಷಕರಿಗೆ ತಿಳಿದೂ ಮಕ್ಕಳು ಹಾದಿ ತಪ್ಪಿದರೆ ಪೋಷಕರೂ ಆರೋಪಿಯಾಗುತ್ತಾರೆ ಎಂದರು.

ತರಬೇತಿಯಲ್ಲಿ ಸಿದ್ಧಮಾಡಿದ ಉಡುಪುಗಳ ಪ್ರದರ್ಶನ ಇರಿಸಲಾಗಿತ್ತು. ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಿದರು. ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಲಕ್ಷ್ಮೀಶ, ಸಂತೋಷ್ ಶೆಟ್ಟಿ, ಕರುಣಾಕರ ಜೈನ್, ಪತ್ರಕರ್ತರ ಸಂಘದ ರಾಜೇಶ್ ಗಾಣಿಗ ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

17/09/2022 11:47 am

Cinque Terre

4.74 K

Cinque Terre

1

ಸಂಬಂಧಿತ ಸುದ್ದಿ