ಮಂಗಳೂರು: ನಗರದ ಪಂಪ್ ವೆಲ್ ನಲ್ಲಿ ತುಂಬೆ ಕುಡಿಯುವ ನೀರಿನ ಪೈಪ್ ಒಡೆದು ಭಾರೀ ಅವಾಂತರ ಸೃಷ್ಟಿಯಾಗಿದೆ. ಏಕಾಏಕಿ ಪೈಪ್ ಒಡೆದಿರುವ ಕಾರಣ ರಸ್ತೆಯಲ್ಲೆಲ್ಲಾ ಅಗಾಧ ಪ್ರಮಾಣದ ನೀರು ಶೇಖರಣೆಯಾಗಿ ರಸ್ತೆಯಲ್ಲಿ ಬಿರುಕು ಮೂಡಿದೆ!
ಸಂಜೆ ಈ ನೀರಿನ ಪೈಪ್ ಒಡೆದಿದೆ. ಪರಿಣಾಮ ರಸ್ತೆಯಲ್ಲೆಲ್ಲಾ ನೀರು ಹರಿದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಭಾರೀ ರಭಸದಲ್ಲಿ ನೀರು ಹರಿದ ಪರಿಣಾಮ ರಸ್ತೆ ಬಿರುಕು ಮೂಡಿದೆ. ತಕ್ಷಣ ಸ್ಥಳಕ್ಕೆ ಮೇಯರ್, ಮನಪಾ ಸದಸ್ಯರು, ಇಂಜಿನಿಯರ್ ಗಳು ದೌಡಾಯಿಸಿ ಪೈಪ್ ದುರಸ್ತಿ ಕಾಮಗಾರಿ ನಡೆಸಲಾಗುತ್ತಿದೆ. ಪೈಪ್ ಒಡೆದ ಪರಿಣಾಮ ಅಶೋಕನಗರ, ಕೋಡಿಕಲ್, ದಂಬೆಲ್, ಮಣ್ಣಗುಡ್ಡ, ಉರ್ವ ಪ್ರದೇಶಗಳಿಗೆ ನೀರಿನ ತೊಂದರೆ ಆಗಲಿದೆ.
ಸುಮಾರು 900 ಎಂಎಂನ ಈ ಪೈಪ್ ಪಂಪ್ ವೆಲ್ ಜಂಕ್ಷನ್ ನಲ್ಲಿ ಒಡೆದಿದೆ. ಇಂಜಿನಿಯರ್ ಗಳು ಆದ್ಯತೆ ಮೇರೆಗೆ ಇಂದು ರಾತ್ರಿ, ನಾಳೆ ಬೆಳಗಾಗುವುದರೊಳಗೆ ಪೈಪ್ ದುರಸ್ತಿ ಕಾಮಗಾರಿ ನಡೆಸಿ, ಜನರಿಗೆ ತೊಂದರೆಯಾಗಂತೆ ನೋಡಿಕೊಳ್ಳಲಾಗುತ್ತದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದ್ದಾರೆ.
Kshetra Samachara
28/06/2022 10:12 pm