ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಆತಂಕ ಸೃಷ್ಟಿಸಿದ್ದ ಎಲ್‌ಪಿಜಿ ಗ್ಯಾಸ್ ಸೋರಿಕೆ ವಾಸನೆ; ಸತ್ಯ ಗೊತ್ತಾದ ಬಳಿಕ ನಿಟ್ಟುಸಿರು ಬಿಟ್ಟ ಜನ

ಮಂಗಳೂರು: ನಗರದ ಹೊರವಲಯದಲ್ಲಿನ ಮುಕ್ಕ ಪ್ರದೇಶದಲ್ಲಿ ಎಲ್‌ಪಿಜಿ ಗ್ಯಾಸ್ ಸೋರಿಕೆಯ ಆತಂಕಕ್ಕೊಳಗಾಗಿದ್ದ ಜನತೆ ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಗ್ಯಾಸ್ ಸೋರಿಕೆಯ ವಾಸನೆಯ ಆತಂಕಕ್ಕೆ ಒಳಗಾಗಿದ್ದ ಜನತೆ ಸ್ಥಳೀಯ ಮನಪಾ ಸದಸ್ಯರಿಗೆ ದೂರು‌ ನೀಡಿದ್ದಾರೆ. ತಕ್ಷಣ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಲಾಗಿತ್ತು. ಆ ಬಳಿಕ ಸೋರಿಕೆ ಎಲ್ಲಿ ಆಗುತ್ತಿದೆಯೆಂದು ಹುಡುಕಾಡಿದಾಗ ಸತ್ಯ ಬಯಲಾಗಿದೆ.

ಹೌದು... ಮುಕ್ಕ ಪರಿಸರದಲ್ಲಿರುವ ಚೆಕ್ ಪೋಸ್ಟ್ ಬಳಿ ಇಟ್ಟಿದ್ದ ಸುಮಾರು 32 ಬ್ಯಾರಲ್ ಗಳಿಂದಲೇ ಈ ಎಲ್ ಪಿಜಿ ಗ್ಯಾಸ್ ನ ವಾಸನೆ ಬರುತ್ತಿತ್ತು. ತಕ್ಷಣ ಸ್ಥಳಕ್ಕೆ ಬಂದ ಮಾಲಿನ್ಯ ನಿಯಂತ್ರಣಾ‌ ಮಂಡಳಿಯ ಅಧಿಕಾರಿಗಳು ಸ್ಥಳದಲ್ಲಿರುವುದು ಎಚ್ ಪಿಸಿಎಲ್ ಗೆ ಸಂಬಂಧಿಸಿರುವ 32 ಖಾಲಿ ಬ್ಯಾರೆಲ್ ಗಳೆಂದು ಪತ್ತೆ ಹಚ್ಚಿದ್ದಾರೆ. ಜೊತೆಗೆ ಅವುಗಳನ್ನು ತುಂಡರಿಸಿ ಚಟ್ಟಿಗಳನ್ನಾಗಿ ಮಾಡುತ್ತಿದ್ದ ವಿಜಯ ಸಿಂಗ್ ಎಂಬಾತನನ್ನು ವಶಕ್ಕೆ ಪಡೆದು ತನಿಖೆ ಮಾಡಿದ್ದಾರೆ.

ಆಗ ಆತ ತಾನು ಬೆಂಗಳೂರು ಮೂಲದ ಸೈಯ್ಯದ್‌‌ ಎಂಬಾತನಿಂದ 300 ಖಾಲಿ ಬ್ಯಾರಲ್ ಗಳನ್ನು ಖರೀದಿಸಿದ್ದೇನೆ. ಅದರಲ್ಲಿ 268 ಬ್ಯಾರಲ್ ಗಳನ್ನು ಹುಬ್ಬಳ್ಳಿಗೆ‌ ಕಳುಹಿಸಲಾಗಿದೆ. 32 ಬ್ಯಾರೆಲ್ ಗಳು ವಾಹನ ದೊರಕದ ಕಾರಣ ಕಳುಹಿಸಿಲ್ಲ ಎಂದಿರುವ ವಿಜಯ್ ಸಿಂಗ್ ಇದಕ್ಕೆ ಎಚ್ ಪಿಸಿಎಲ್ ನಿಂದ ನೀಡಲಾಗಿದ್ದ ರಶೀದಿಯನ್ನು ನೀಡಿದ್ದಾನೆ. ಇದೀಗ ಅಲ್ಲಿರೋದು ಖಾಲಿ ಬ್ಯಾರೆಲ್ ಗೆಂದು ಖಚಿತವಾದ ಬಳಿಕ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಅನಿಲ ಸೋರಿಕೆ ಪ್ರಕರಣ ಅಂತ್ಯ ಕಂಡಿದೆ.

Edited By : Nagesh Gaonkar
PublicNext

PublicNext

16/06/2022 10:53 pm

Cinque Terre

48.27 K

Cinque Terre

0

ಸಂಬಂಧಿತ ಸುದ್ದಿ